ಮುಂಬಯಿ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಏಳಿಂಜೆ ಇಲ್ಲಿನ ಉಳೆಪಾಡಿ ಪಳ್ಳದಕಲಾ ಹೊಸಮನೆ ನಿವಾಸಿ ಶತಾಯುಷಿ ಗಿರಿಜಾ ಸೂರಪ್ಪ ಪೂಜಾರಿ (೧೦೧) ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ತನ್ನ ಹೊಸಮನೆ ಸ್ವಗೃಹದಲ್ಲಿ ವೃದ್ಧಾಪ್ಯ ಸಹಜತೆಯಿಂದ ನಿಧನರಾದರು.

ಮೃತರು ಇತ್ತೀಚೆಗಷ್ಟೇ ನೂರು ವರ್ಷಗಳನ್ನು ಪೂರೈಸಿ ಶತಾಯುಷಿಯಾಗಿ ಬಾಳಿದ್ದರು. ಮೃತರು ಮುಂಬಯಿ ಉಪನಗರ ಭಿವಂಡಿ ಇಲ್ಲಿನ ಪೂಜಾರಿ ಟ್ರಾವೆಲ್ಸ್ನ ಮಾಲೀಕ ರಾಜೇಶ್ಎಸ್.ಪೂಜಾರಿ ಸೇರಿದಂತೆಮೂರು ಗಂಡು, ನಾಲ್ಕು ಹೆಣ್ಣು ಮತ್ತು ಬಂಧುಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು (ನ.೦೫) ಶನಿವಾರ ಬೆಳಿಗ್ಗೆ೧೦.೦೦ ಗಂಟೆಗೆ ಉಳೆಪಾಡಿ ಇಲ್ಲಿ ನೆರವೇರಿಸಲಾಗುವುದು ಎಂದು ಪಳ್ಳದಕಲಾ ಕುಟುಂಬಸ್ಥರು ತಿಳಿಸಿದ್ದಾರೆ.
