ಬೆಂಗಳೂರು: ಕೆಲವೇ ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕಾರಣಕ್ಕಾಗಿ ತಲೆದಂಡ ತೆತ್ತಿದ್ದ ಕಾಂಗ್ರೆಸ್ನ ಶಶಿ ತರೂರ್ ವಿವಾದ ಹಸಿಯಾಗಿರುವಾಗಲೇ ಇದೀಗ ಕಾಂಗ್ರೆಸ್ನ ಇನ್ನೋರ್ವ ಮುಖಂಡ ದಿಗ್ವಿಜಯ್ ಸಿಂಗ್ ಅವರು ಮೋದಿಯನ್ನು ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Digvijay_Singh

ನರೇಂದ್ರ ಮೋದಿ ಅವರು ಕೆಲವು ದಿನಗಳ ಹಿಂದೆ ವಿದೇಶ ಪ್ರವಾಸ ಕೈಗೊಂಡು ಅಲ್ಲಿ ಹಲವು ಕಡೆಗಳಲ್ಲಿ ಭಾಷಣ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಯಶಸ್ವಿಯಾಗಿದೆ. ಅವರೋರ್ವ ಯಶಸ್ವೀ ನಾಯಕ ಎಂದು ನರೇಂದ್ರ ಮೋದಿ ಅವರನ್ನು ದಿಗ್ವಿಜಯ್ ಸಿಂಗ್ ಹೊಗಳಿರುವುದು ವಿವಾದಕ್ಕೆ ಕಾರಣವಾಗಿದೆ.

ಶಶಿ ತರೂರು ಅವರು ಮೋದಿಯನ್ನು ಹೊಗಳಿ ತಮ್ಮ ವಕ್ತಾರನ ಹುದ್ದೆಯನ್ನು ಕಳೆದುಕೊಂಡಿದ್ದರು. ಇದೀಗ ದಿಗ್ವಿಜಯ್ ಸಿಂಗ್ ಅವರ ನಡೆ ಕೆಲವು ಹಿರಿಯ ನಾಯಕರಿಗೆ ಕಿರಿಕಿರಿಯಾಗಿದೆ.

By Suddi9

Leave a Reply

Your email address will not be published. Required fields are marked *