ಮೂಡುಬಿದಿರೆ : ತಾಲೂಕಿನ ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ಅಕ್ರಮವಾಗಿ ತುಂಬಿಸಿಕೊಂಡು ಮುಂಜಾನೆ ಹೌದಾಲ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಮೂಡುಬಿದಿರೆ ವೃತ್ತ ನಿರೀಕ್ಷಕ ಬಿ.ಎಸ್ . ದಿನೇಶ್ ಕುಮಾರ್ ಅವರ ತಂಡವು ಬೆನ್ನತ್ತಿ ವಾಹನ ಮತ್ತು ದನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.ಆರೋಪಿಗಳು ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದು ಈ ಸಂದರ್ಭ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
