ಬಂಟ್ವಾಳ:ಬಂಟ್ವಾಳ ಬೂಡ ಅಧ್ಯಕ್ಷರ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಖಾತೆ ಸೃಷ್ಟಿಸಿ ಯಾರೋ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.

ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ಹೆಸರಿನಲ್ಲಿ ಖಾತೆ ಸೃಷ್ಟಿಸಲಾಗಿದ್ದು, ಅವರ ಸ್ನೇಹಿತರಿಗೆ ರೆಕ್ವೆಸ್ಟ್ ಕಳುಹಿಸಿ ಬಳಿಕ ಹಣಕ್ಕಾಗಿ ಮೆಸೇಜ್ ಕಳುಹಿಸಲಾಗಿದೆ. ಈ ವಿಚಾರವನ್ನು ಅವರ ಆತ್ಮೀಯರು ಗಮನಕ್ಕೆ ತಂದಿದ್ದು, ಘಟನೆಯ ಕುರಿತು ಸೈಬರ್ ಕ್ರೈಮ್ ಗೆ ದೂರು ನೀಡುವುದಾಗಿ ದೇವದಾಸ್ ಶೆಟ್ಟಿ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *