ಕುಪ್ಪೆಪದವು: ನೇಣು ಬಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಊದು ಶಾಂತಿಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ.
ಯುವಕನನ್ನು ವಾಲ್ಟರ್ ಕುಟಿನ್ನ್ಹ(36)ಎಂದು ಗುರುತಿಸಲಾಗಿದೆ.
ಕುಪ್ಪೆಪದವು ಕಿಲೆಂಜಾರಿನ ಊದುಗುಡ್ಡೆ ನಿವಾಸಿ ಸಿಲ್ವೆಸ್ಟರ್ ಕುಟಿನ್ನ ಎಂಬವರ ಮಗನಾದ ವಾಲ್ಟರ್ ಕೂಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು ಕೆಲವು ವ್ಯಕ್ತಿಗಳು ನನ್ನನ್ನು ಬೆದರಿಸುತ್ತಿದ್ದಾರೆ ಎಂದು ಮನೆ ಮಂದಿಯಲ್ಲಿ ಹೇಳಿದ್ದ ಅಲ್ಲದೆ ಕುಪ್ಪೆಪದವಿನ ಯುವಕನೊಬ್ಬ ವಾಲ್ಟರ್ ಮಾತನಾಡಿದ್ದ ಆಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ ಇನ್ನು ನಿನ್ನನ್ನು ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ ಆಮೇಲೆ ನಿನಗೆ ಜೈಲೇ ಗತಿ ಎಂದು ಹೆದರಿಸುತ್ತಿದ್ದ ಬಗ್ಗೆ ವಾಲ್ಟರ್ ಹೇಳುತ್ತಿದ್ದ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗೆ ಹೇಳುತ್ತಿದ್ದ ವಾಲ್ಟರ್ ಭಾನುವಾರ ಸಂಜೆ ಸುಮಾರು 3 ಗಂಟೆಗೆ ಮನೆಯ ಎದುರುಗಡೆ ಇರುವ ಕೊಟ್ಟಿಗೆಯ ಒಳಗೆ ಹೋಗಿ ಬಾಗಿಲು ಮುಚ್ಚಿ ಕಬ್ಬಿಣದ ಪೈಪ್ ಓದನ್ನು ಗೋಡೆಗೆ ಆಧಾರವಾಗಿಟ್ಟು ಬಟ್ಟೆಯ ಶಾಲಿನಿಂದ ನೇಣು ಬಿಗಿದು ಕೊಂಡಿದ್ದು, ಒಳಗಡೆ ಹೋದ ವಾಲ್ಟರ್ ಹೊರಗೆ ಬಾರದೆ ಇರುವುದನ್ನು ಗಮನಿಸಿ ಕಿಟಕಿಯಿಂದ ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿತ್ತು. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

