ಬಡಗಬೆಳ್ಳೂರು:ವಿಶ್ವಹಿಂದು ಪರಿಷತ್ ಬಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ಜಗತ್ತಿಗೇ ಅಂಟಿದ ಕೊರೋನಾ ಎಂಬ ಮಹಾಮಾರಿಯ ವಿರುದ್ದ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತ ರಿಗೆ ಸನ್ಮಾನ ಸಮಾರಂಭ ಇದೇ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವಪ್ಪ ಪೂಜಾರಿ ಬಾಳಿಕೆ  ಇವರಿಗೆ ಅಭಿನಂದನ ಕಾರ್ಯಕ್ರಮ  ಆ.2ರಂದು ಭಾನುವಾರ  ಬಡಗಬೆಳ್ಳೂರು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು .25f15a08-fd1a-4f47-b7b3-1203711f318a (1)

ಬಡಗಬೆಳ್ಳೂರಿನ ಆಶಾ ಕಾರ್ಯಕರ್ತರಾದ  ರೇವತಿ, ಸವಿತಾ,  ಮುತ್ತಮ್ಮ , ವೇದಾವತಿ ಮತ್ತು  ಇಂದಿರಾ  ಸಿಸ್ಟರ್  ಇವರನ್ನು  ಶಾಲು ಹೊದಿಸಿ ,ಸ್ಮರಣಿಕೆ, ಹಣ್ಣುಹಂಪಲು ,25kg ಅಕ್ಕಿ ನೀಡಿ ಗೌರವಿಸಲಾಯಿತು.ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ  ಇವರನ್ನು ಅಭಿನಂದಿಸಲಾಯಿತು. c1f2a5b1-9923-456e-b4f7-0d3a780c2a2f

ಈ ಸಂಧರ್ಭದಲ್ಲಿ ಭರತ್ ಕುಮ್ಡೇಲು( ಪುತ್ತೂರು ಜಿಲ್ಲಾ ಸಹ ಸಂಯೋಜಕರು ಬಜರಂಗದಳ) ಶಿವು ತುಂಬೆ(ಸಂಯೋಜಕರು ಬಜರಂಗದಳ ಬಂಟ್ವಾಳ ಪ್ರಖಂಡ)ಅಭಿನ್ ರೈ , ಸುರೇಶ್ ಬೆಂಜನಪದವು,ಪ್ರಸಾದ್ ಶಿವಾಜಿನಗರ,ನರೇಂದ್ರನಾಥ ಭಂಡಾರಿ, ಯುವರಾಜ್ ಭಂಡಾರಮನೆ ,ಸಂದೀಪ್ ಕಮ್ಮಾಜೆ ,ನಾಗರಾಜ್ ಬೆಳ್ಳೂರು,ಹರೀಶ್ ಕೇಪುಲಡ್ಕ,ಸುಮಿತ್ ಧನುಪುಜೆ  ಹಾಗೂ ಸಂಘಟನೆಯ ಕಾರ್ಯಕರ್ತರು ,ಗ್ರಾಮಸ್ಥರು   ಕಾರ್ಯಕ್ರಮದಲ್ಲಿ  ಪಾಲ್ಗೋಂಡಿದ್ದರು.ತೇಜಾಕ್ಷ ಬೆಳ್ಳೂರು ಸ್ವಾಗತಿಸಿ , ಸುಮಿತ್ ಧನುಪುಜೆ  ವಂದಿಸಿದರು.  ವಿಶ್ವ ಹಿಂದು ಪರಿಷತ್ ಬಜರಂಗದಳ ವೀರಕೇಸರಿ ಉಪಾಧ್ಯಕ್ಷ ಶರತ್ ಕೇಪುಲಡ್ಕ ನಿರೂಪಿಸಿದರು.

ಸಮರ್ಪಿಸಿದರು

By Suddi9

Leave a Reply

Your email address will not be published. Required fields are marked *