ಕೈಕಂಬ :ರಾಜ್ಯ ಮತ್ತು ಕೇಂದ್ರ ಸರ್ಕಾರವು ಲಾಕ್‍ಡೌನ್ ಹೆಸರಲ್ಲಿ ದಂಧೆ ನಡೆಸುತ್ತಿದೆ ಮತ್ತು ಜನರ ದಿಕ್ಕು ತಪ್ಪಿಸುತ್ತಿದೆ. ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಪರಿಹಾರವಲ್ಲ. ಪ್ರಸಕ್ತ ಎಲ್ಲವೂ ಮುಕ್ತವಾಗಿರುವ ಲಾಕ್‍ಡೌನ್ ನಿಯಮ ಅನ್‍ಲಾಕ್‍ಗೆ ಭಿನ್ನವಾಗಿಲ್ಲ. ಕೇರಳ ಮಾದರಿಯಲ್ಲಿ ಕ್ರಮ ಕೈಗೊಂಡಲ್ಲಿ ಕೊರೊನಾ ನಿಯಂತ್ರಿಸಲು ಸಾಧ್ಯ ಎಂದು ಸಿಪಿಐಎಂ ಗುರುಪುರ ವಲಯ ಸಮಿತಿ ಅಧ್ಯಕ್ಷ ಸದಾಶಿವ ದಾಸ್ ಹೇಳಿದರು.
`ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಹಾರವಲ್ಲ’ ಎಂಬ ಘೋಷಣೆಯೊಂದಿಗೆ ಸಿಪಿಐಎಂ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಪ್ರತಿಭಟನೆಯಂಗವಾಗಿ ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಜು. 15ರಂದು ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಿಪಿಐಎಂ ಮುಖಂಡ ಗಂಗಯ್ಯ ಅಮೀನ್ ಮಾತನಾಡಿ, ಕೊರೊನಾ ಕ್ಕೆ ಬಿಡುಗಡೆಯಾಗಿರುವ ಕೋಟ್ಯಂತರ ರೂ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಾಗಿಲ್ಲ. ಬಡಬಗ್ಗರಿಗೆ ಎಲ್ಲಿ ಪರಿಹಾರ ಸಿಕ್ಕಿದೆ ? ಬೀಡಿ ಕಾರ್ಮಿಕರಿಗೆ ಈ ಸರ್ಕಾರಗಳು ಒಂದು ನಯಾಪೈಸೆ ನೀಡಿಲ್ಲ. ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯವರು ಲೂಟಿ ಮಾಡಿದರೆ, ಸರ್ಕಾರಿಯವರು ದಿನಕ್ಕೆ ಎರಡು ಮಾತ್ರೆ ಕೊಟ್ಟು ಸತಾಯಿಸುತ್ತಿದ್ದಾರೆ. ಕರ್ಖಾನೆ, ವಾಹನ, ಅಂಗಡಿ-ಮುಂಗಟ್ಟು ತೆರೆದಿಡಲು ಅವಕಾಶವಿರುವುದು `ಲಾಕ್‍ಡೌನ್’ ಪದಕ್ಕೆ ಅವಮಾನ ಎಂದರು.
ಸಭೆಯಲ್ಲಿ ಸಿಪಿಐಎಂ ಕಾರ್ಯಕರ್ತರಾದ ವಾರಿಜಾ, ವಸಂತಿ ಕುಪ್ಪೆಪದವು, ಯಶೋದಾ ಮಳಲಿ, ಹೊನ್ನಯ್ಯ ಅಮೀನ್, ಶೇಖರ ಪೂಜಾರಿ, ಬಾಬು ಪೂಜಾರಿ, ಬಾಬು ಸಾಲ್ಯಾನ್ ಮತ್ತಿತರರು ಇದ್ದರು. ನೋಣಯ್ಯ ಗೌಡ ಸ್ವಾಗತಿಸಿ, ಪ್ರಸ್ತಾವಿಸಿದರು. ಹಸನಬ್ಬ ವಂದಿಸಿದರು.
ಸಿಪಿಐಎಂ ಆಗ್ರಹ :
* ಲಾಕ್‍ಡೌನ್ ಸಂದರ್ಭದಲ್ಲಿ ಜನತೆಗೆ ಆಹಾರ ಸಾಮಗ್ರಿ ಒದಗಿಸಲಿ. * ಕೊರೊನಾ ಸೋಂಕಿತರಿಗೆ ತಾರತಮ್ಯವಿಲ್ಲದೆ ಚಿಕಿತ್ಸೆ ಸಗುವಂತಾಗಲಿ. * ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕ ಮಾಡಿ. * ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ. * ಆರೋಗ್ಯ ಸಿಬ್ಬಂದಿಗೆ ಸುರಕ್ಷತಾ ಆರೋಗ್ಯ ಕಿಟ್ ಒದಗಿಸಿ. * ಸೀಲ್‍ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಈ ಮೊದಲಾದ ಘೋಷಣಾ ಫಲಕಗಳು ಕಂಡು ಬಂದವು.
