ಬಂಟ್ವಾಳ: ಮೊದಲೇ ಅಗಲಕಿರಿದಾದ ಬಂಟ್ವಾಳ ಪೇಟೆಯಲ್ಲಿ ಸೋಮವಾರ ಬೆಳಗ್ಗಿನ ಪೀಕ್ ಅವರ್ ವಾಹನಗಳ ಸಂಚಾರದ ಭರಾಟೆಗೆ ಪುಲ್ ಟ್ರಾಫಿಕ್ ಜಾಮ್ .. ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತ ಜುಲೈ 18ರ ವರೆಗೆ ಈ ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ ಬಳಿಕ ಲಘು ವಾಹನಗಳು,ಖಾಸಗಿ,ಕೆಲ ಸರಕಾರಿ,ಖಾಸಗಿ ಬಸ್ ಗಳು ಬಂಟ್ವಾಳ ಪೇಟೆಯ ಮೂಲಕ ಸಾಗುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್ ಮಾಮೂಲಿ ದೃಶ್ಯವಾಗಿದೆ.ವಾಹನ ಸಂಚಾರದ ಒತ್ರಡದ ಜೊತೆಗೆ  ರಸ್ತೆ,ಅಂಗಡಿ ಬದಿಯಲ್ಲಿ ವಾಹನಗಳ ನಿಲುಗಡೆ ಪರಿಣಾಮ ಇದೀಗ ಟ್ರಾಫಿಕ್ ಜಾಮ್ ಮಾಮೂಲಿಯಾಗಿ ಬಿಟ್ಟಿದೆ.IMG_20200713_102655

ಜಗಲಿ ಮೇಲೆ ವಾಕ್:    

ಇದರಿಂದಾಗಿ ಜನಸಾಮಾನ್ಯರು ಮಾತ್ರ ರಸ್ತೆ ಬಿಟ್ಟು ಅಂಗಡಿ ಜಗಲಿಯಲ್ಲಿಯೇ ವಾಕ್ ಮಾಡಬೇಕಾಗುತ್ತದೆ.  ಬಂಟ್ವಾಳ ಬಡ್ಡಕಟ್ಟೆಯಿಂದ ಪುರಸಭಾ ಕಚೇರಿ ವರೆಗೂ ವಾಹನಗಳು ಎದುರು-ಬದುರಾಗಿ ಸರತಿಯ ಸಾಲಿನಲ್ಲಿ ಸಂಚರಿಸಬೇಕಾಯಿತು.ಈ ಮಧ್ಯೆ ಕೆಲ ದ್ವಿಚಕ್ರ ಸವಾರರು,ಆಟೋರಿಕ್ಷಾಗಳು ಹಾಗೆಯೇ ಇತರ ವಾಹನಗಳು ಇದರ ಮಧ್ಯೆ ತೂರಿ ಮುಂದಕ್ಕೆ ಓವರ್ ಟೇಕ್ ಮಾಡಲು ಪ್ರಯತ್ನಿಸುವ ದೃಶ್ಯಗಳು ಕಂಡುಬಂತು.ಬೆಳಗ್ಗೆಯಿಂದ ಸುಮಾರು 11.30 ರವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು.IMG_20200713_103230

ಲಾಕ್ ಡೌನ್  ವದಂತಿ  : 

ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಮಂಗಳವಾರದಿಂದ ದ.ಕ.ಜಿಲ್ಲೆ ಕೂಡ ವಾರದ ಕಾಲ ಲಾಕ್ ಡೌನ್ ಅಗುಬಹುದೆಂಬ ವದಂತಿಯ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನರು ತಮ್ಮ,ತಮ್ಮ ವಾಹನದಲ್ಲಿ ಮತ್ತು ಬಾಡಿಗೆ ವಾಹನದ ಮೂಲಕ ಅಗತ್ಯ ಸಾಮಾಗ್ರಿ ಖರೀದಿ,ಬ್ಯಾಂಕ್ ವ್ಯವಹಾರಕ್ಕಾಗಿ ಪೇಟೆಗೆ ಅಗಮಿಸಿದ್ದು ,ಇದರಿಂದಾಗಿ ವಾಹನ ಸಂಚಾರದ ಒತ್ತಡ ಹೆಚ್ಚಾಗಿತ್ತು.ಬಂಟ್ವಾಳ ಟ್ರಾಫಿಕ್ ಠಾಣೆಯ ಇಬ್ಬರು ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರೂ ಮೂರು ದಿಕ್ಕು ಮತ್ತು ಒಳ ರಸ್ತೆ ಮೂಲಕವು ವಾಹನಗಳು ಸರತಿಯಲ್ಲಿ ಅಗಮಿಸಿ,ಮುಖ್ಯ ರಸ್ತೆಗೆ ಪ್ರವೇಶಿಸುವಾಗ ಮತ್ತೆ ಟ್ರಾಫಿಕ್ ಜಾಮ್ ಉಂಟಾಗುತಿತ್ತು. ಹಾಗಾಗಿ ಟ್ರಾಫಿಕ್ ಸಿಬ್ಬಂದಿಗಳಿಗೆ ಇದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.

ಬಡ್ಡಕಟ್ಟೆಯಿಂದ ವೆಂಕಟರಮಣ ದೇವಸ್ಥಾನದ ವರೆಗೆ ರಸ್ತೆ ಇಕ್ಕೆಲದಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ ಎಂಬ ನಿಯಮವನ್ನು ಪೊಲೀಸ್ ಅಧಿಕಾರಿಗಳ ಹಲವು ಸಭೆಯಲ್ಲಿ ತೀರ್ಮಾನಿಸಲಾಗಿತ್ತಾದರೂ,ಅದಿಲ್ಲಿ ಪಾಲನೆ ಕಷ್ಟಸಾಧ್ಯವಾಗಿದೆ.ಎಲ್ಲಾ ವಾಹನಗಳು ರಸ್ತೆ ಬದಿಯಲ್ಲಿಯೇ ಪಾಕ್೯ ಮಾಡುತ್ತವೆ.ರಸ್ತೆ ಅಗಲವಂತು ,ಇಲ್ಲ..ವಾಹನ ಪಾರ್ಕಿಂಗ್ ಗೆ ಜಾಗವು ಇಲ್ಲ ಹಾಗಾಗಿ ಅಂಗಡಿಗಳ ಮುಂದೆ ಪಾರ್ಕಿಂಗ್ ಅನಿವಾರ್ಯವಾಗಿ ಬಿಟ್ಟಿದೆ.

By Suddi9

Leave a Reply

Your email address will not be published. Required fields are marked *