ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಬಂಟ್ವಾಳ ವಲಯ (ರಿ) ವಿಟ್ಲ ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಪ್ರತಿಷ್ಠಾನ ಬಂಟ್ವಾಳ ಇದರ ಕಾರ್ಯಕಾರಿ ಸಭೆ ಹಾಗೂ ಧರ್ಮದರ್ಶಿಗಳ ಪ್ರಥಮ ಸಭೆಯು ಮೆಲ್ಕಾರ್ ನಲ್ಲಿರುವ ಆರ್ .ಕೆ .ಎಂಟರ್ ಪ್ರೈಸಸ್ ನಲ್ಲಿ ನಡೆಯಿತು. ಕೋವಿಡ್ ಮಹಾಮಾರಿಯು ಕಾಡುತ್ತಿರುವ ಹಿನ್ನಲೆಯಲ್ಲಿ ಈ ಸಾಲಿನ ಮಹಾಸಭೆಯನ್ನು ಮುಂದಿನ ವರ್ಷ ನಡೆಸುವುದೆಂದು ನಿರ್ಣಯಿಸಲಾಯಿತು.ವಿದ್ಯಾರ್ಥಿ ವೇತನ ವಿತರಣೆಗೆ ಸಂಬಂಧಿಸಿ ಚರ್ಚಿಸಲಾಯಿತು.ಪರೀಕ್ಷಾ ಫಲಿತಾಂಶಗಳು ಬಂದ ಬಳಿಕ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಪಡೆಯಲು ನಿರ್ಣಯಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಶ್ರೀ ಸುಬ್ರಮಣ್ಯ ಸಹಕಾರಿ ಸಂಘದ ಬಂಟ್ವಾಳ ಮತ್ತು ವಿಟ್ಲ ಶಾಖೆಗಳ ಸಲಹಾ ಸಮಿತಿಯ ಆಯ್ಕೆಯನ್ನು ಬ್ಯಾಂಕ್ ಅಧ್ಯಕ್ಷರ ಸಲಹೆಯ ಬಗ್ಗೆ, ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ ಪ್ರವಾಸ ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೃಷ್ಣಶರ್ಮ ಅನಾರು, ಅಧ್ಯಕ್ಷ ಭವಾನಿಶಂಕರ ರಾವ್ ಬಿ.ಸಿ.ರೋಡ್, ಸಹ ಕಾರ್ಯದರ್ಶಿ ಸತೀಶ್ ರಾವ್ ಪೆರ್ನೆ, ಖಜಾಂಚಿ ಹರೀಶ್ ಕುಮಾರ್ ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಬ್ಯಾಂಕ್ ನ ಪರವಾಗಿ ಆಡಳಿತ ನಿರ್ದೇಶಕ ನಾಗೇಶರಾವ್ ಸಲಹೆ, ಸೂಚನೆಗಳನ್ನು ನೀಡಿದರು.
ಕಾವಳಕಟ್ಟೆಯಲ್ಲಿ ಸಭಾಕ್ಕಾಗಿ ದಾನಿಗಳು ನೀಡಿರುವ ಜಾಗದ ಜವಾಬ್ದಾರಿಯನ್ನು ಪ್ರತಿಷ್ಠಾನದ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.ಕಟ್ಟಡ ನಿರ್ಮಾಣಕ್ಕೆ ಬೇಕಾದ ಯೋಜನೆಯನ್ನು ಹಾಕುವ ನಿಟ್ಟಿನಲ್ಲಿ ಉಪ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
