ಬಂಟ್ವಾಳ: ಚೀನಾದ ಕುತಂತ್ರದ ವಿರುದ್ಧ ಎದೆಯೊಡ್ಡಿ ನಿಂತು ರಾಷ್ಟ್ರದ ರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಜೀಪ ವಲಯ ಇದರ ವತಿಯಿಂದ ಸಜೀಪ ಮೂಡದ ಶ್ರೀ ನಾರಾಯಣ ಗುರು ಜ್ಞಾನ ಮಂದಿರದ ಶ್ರೀ ಗುರು ಸಭಾಭವನದಲ್ಲಿ ನುಡಿನಮನ ಸಭೆ ನಡೆಯಿತು.

IMG-20200621-WA0033
ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ರಾಜೇಂದ್ರ ಇವರು ನುಡಿ ನಮನ ಸಲ್ಲಿಸಿದರು. ನೆರೆದಿದ್ದಕಾರ್ಯಕರ್ತರು ಸಜ್ಜನ ರಾಷ್ಟ್ರ ಭಕ್ತರು ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.IMG-20200621-WA0031

ಜ್ಞಾನ ಮಂದಿರದ ಉಪಾಧ್ಯಕ್ಷ ಯಶವಂತ ದೇರಾಜೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಅರುಣ್ ಕುಮಾರ್ ಕುಕ್ಕುದಕಟ್ಟೆ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸಜೀಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಜೀಪ ಮಂಡಲ ಕಾರ್ಯವಾಹ ಗಣೇಶ್ ಕಾರಾಜೆ, ವಿಶ್ವ ಹಿಂದೂ ಪರಿಷತ್ ಸಜೀಪ ವಲಯ ಗೌರವಾಧ್ಯಕ್ಷ ಜಯಪ್ರಕಾಶ್ ಪೆರ್ವ, ವಿಶ್ವ ಹಿಂದೂ ಪರಿಷತ್ ಸಜೀಪ ವಲಯ ಅಧ್ಯಕ್ಷ ಮನೋಹರ್ ಕರ್ಕೇರಾ, ಸಜೀಪ ವಲಯ ಭಜರಂಗದಳ ಸಂಚಾಲಕ ಶರತ್ ಸಜೀಪ ಮೊದಲಾದವರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *