ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ರಾಯಿ ಸಮೀಪದ ಮಂಜುಶ್ರೀ ಸಭಾ ಭವನದಲ್ಲಿ ಭಾನುವಾರ ಯೋಗದ ಮೂಲಕ ಆಚರಿಸಲಾಯಿತು.ಯೋಗ ಗುರುಗಳಾದ ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ ರಾಯಿ ಇವರು ಯೋಗ ಅಭ್ಯಾಸ ಮಾಡಿಸಿದರು.ಈ ಸಂದರ್ಭ ಮಾತನಾಡಿದ ಅವರು, ಪತಂಜಲಿ ಮಹಾ ಮುನಿವರ್ಯರಿಂದ ಭಾರತೀಯ ನೆಲದಲ್ಲಿ ಆರಂಭಗೊಂಡ ಈ ಯೋಗಭ್ಯಾಸವು ಮನುಷ್ಯನ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯವಾಗಿಯೂ ಪರಿಣಾಮ ಬೀರಿದೆ ಎಂದರು.

ಭಾರತೀಯ ಈ ಯೋಗಭ್ಯಾಸ ಆಚರಣೆಯನ್ನು ಅಂತರಾಷ್ಟ್ರೀಯ ದಿನಾಚಾರಣೆಯನ್ನಾಗಿ ಆಚರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಒತ್ತಡ ಹೇರಿ 2014 ರಲ್ಲಿ ವಿಶ್ವಯೋಗ ದಿನಾಚರಣೆಗೆ ಚಾಲನೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಯತೆ ಸಲ್ಲಿಸಿದರು.ಬಂಟ್ವಾಳ ಬಿ.ಜೆ.ಪಿ.ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮಾತಾನಾಡಿ ಯೋಗಭ್ಯಾಸವನ್ನು ಕೇವಲ ವಿಶ್ವಯೋಗ ದಿನಾಚರಣೆ ಸೀಮಿತಗೊಳಿಸದೆ ದಿನ ನಿತ್ಯವೂ ಮಾಡುವ ಅಭ್ಯಾಸವನ್ನು ಬೆಳಸಿಕೊಂಡು ಭಾರತೀಯ ಸಂಸ್ಕಾರ, ಧರ್ಮ ಜಾಗೃತಿಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಒದಗಿಬಂದಿದೆ ಎಂದರು.
ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಅದ್ಯಕ್ಷ ಸೀತರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ,ಉಮೇಶ್ ಅರಳ,ಸಂತೋಷ್ ರಾಯಿಬೆಟ್ಟು, ಉಮೇಶ್ ಗೌಡ ,ಮಧುಕರ ಬಂಗೇರ ,ದೀಪಕ್ ಶೆಟ್ಟಿಗಾರ್,ಪರಮೇಶ್ವರ ಪೂಜಾರಿ, ರಾಘವ ಅಮೀನ್, ಬಿ.ಜೆ.ಪಿ.ಯ ಬೂತ್ ಸಮಿತಿಯ ಪದಾಧಿಕಾರಿಗಳುಪ್ರಮುಖರು, ಕಾರ್ಯಕರ್ತರು, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.
