ಬಂಟ್ವಾಳ: ಲೋಕಕಲ್ಯಾಣಾರ್ಥವಾಗಿ ಹಾಗೂ ಕರೋನಾ ಮಹಾಮಾರಿಯ ನಿವಾರಣೆಗಾಗಿ ದಡ್ಡಲಕಾಡುವಿನ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಬೆಳಿಗ್ಗೆ ಕರೆಂಕಿಯ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ಯಾಗ ನಡೆಯಿತು.

ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ಗುರುರಾಜ್ ಭಟ್ ಮತ್ತು ಬಳಗದವರ ಪೌರೋಹಿತ್ಯದಲ್ಲಿ ವೇದ, ಮಂತ್ರಗಳ ಪಠಣದೊಂದಿಗೆ ಶ್ರೀ ಧನ್ವಂತರಿ ಜಪ ಹಾಗೂ ಹವನ ಸಂಪನ್ನಗೊಂಡಿತು. ಕರೋನಾ ಲಾಕ್ಡೌನ್ನಿಂದಾಗಿ ದೇವಸ್ಥಾನದ ಪ್ರವೇಶವಿಲ್ಲದೆ ಮನೆಯಲ್ಲಿಯೇ ಉಳಿದಿದ್ದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಸಾಹದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಿತು. ಎಸ್ಎಸ್ಎಲ್ಸಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕವಿಲ್ಲದೆ ಪರೀಕ್ಷೆ ಎದುರಿಸುವಂತೆ ವಿಶೇಷ ಪ್ರಾರ್ಥನೆಯನ್ನೂ ಮಾಡಲಾಯಿತು.

ಈ ಸಂದರ್ಭ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಟ್ರಸ್ಟ್ ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ಪುರುಷೋತ್ತಮ ಅಂಚನ್, ಪೂವಪ್ಪ ಮೆಂಡನ್, ನವೀನ್ ಸೇಸಗುರಿ, ದೀಪಕ್ ಸಾಲ್ಯಾನ್, ದಿಲೀಪ್ ಡೆಚ್ಚಾರ್, ಅಶ್ವಥ್ ಡೆಚ್ಚಾರ್, ಗೋಪಾಲ ಪೂಜಾರಿ, ವಿಶ್ವನಾಥ ಪೂಜಾರಿ, ಮಹೇಶ್, ಸುಂದರ ಗೌಡ, ಕೃಷ್ಣ ಚೆಂಡ್ತಿಮಾರ್, ಚಿದಾನಂದ ಚೆಂಡ್ತಿಮಾರ್ ಪ್ರಮುಖರಾದ ಕರುಣಾಕರ್ ಕುಲಾಲ್, ಗೋಪಾಲ ಪೂಜಾರಿ ಕರೆಂಕಿ, ಜಗದೀಶ್ ಕುಲಾಲ್, ಆನಂದ, ರಮೇಶ್ ಕುಲಾಲ್, ಕೊರಗಪ್ಪ ಪೂಜಾರಿ, ವಸಂತಿ ಕೆ. ಪೂಜಾರಿ, ಅಕ್ಷತಾ ದಿನೇಶ್ ಮತ್ತಿತರರು ಹಾಜರಿದ್ದರು.
