ಬಂಟ್ವಾಳ: ಇಲ್ಲಿಯ ತಾಲೂಕಿನ ಸಜೀಪನಡುಗ್ರಾಮದಲ್ಲಿ ಮೊದಲಿಗೆ ಹತ್ತು ತಿಂಗಳ ಮಗುವಿಲ್ಲಿ ಕೊರೋನ ಸೋಂಕು ದೃಢವಾದ ಬಳಿಕ ಹಾಕಲಾಗಿದ್ದ ಸೀಲ್ ಡೌನ್ ನಿಂದ ಈ ಗ್ರಾಮವನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.IMG_20200422_102521
ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಜೊತೆಗೆ ಬೆಳ್ತಂಗಡಿಯ ಕರಾಯ,ಸುಳ್ಯದ ಅಜ್ಜಾವರದಲ್ಲಿದ್ದ ಸೀಲ್ ಡೌನ್ ನನ್ನು ತೆರವುಗೊಳಿಸಲಾಗಿದೆ. ಈ ಮೂರು ಪ್ರದೇಶದಲ್ಲಿ ಕೊರೋನ ಸೋಂಕು ಪತ್ತೆಯಾದ ಬಳಿಕ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದು ಕ್ವಾರಂಟೈನ್ ನಲ್ಲಿದ್ದವರಿಗೆ 28 ದಿನದ ನಂತರವು ಸೋಂಕು ಕಾಣಿಸದ ಹಿನ್ನಲೆಯಲ್ಲಿ ಇಲ್ಲಿ ಸೀಲ್ ಡೌನ್ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪನಡುಗ್ರಾಮದಲ್ಲಿ ಹತ್ತು ತಿಂಗಳ ಮಗುವಿಗೆ ಮೊದಲಿಗೆ ಕೊರೋನ ಸೋಂಕು ಕಣಿಸಿಕೊಂಡರೆ ಬಳಿಕ ತುಂಬೆಯ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದ್ದು,ಅಲ್ಲಿ ಸದ್ಯ ಸೀಲ್ ಡೌನ್ ಮುಂದುವರಿದಿದೆ. ಅದಾದ ನಂತರ ಬಂಟ್ವಾಳ ಕಸ್ಬಾಗ್ರಾಮದ ಪೇಟೆಯಲ್ಲಿ ಎರಡು ಅಕ್ಕಪಕ್ಕದ ಎರಡು ಮನೆಯಲ್ಲಿ ಸೋಂಕು ಕಾಣಿಸಿತ್ತು.ಇಲ್ಲಿ ಒಂದು ಮನೆಯ ಸೊಸೆ,ಅತ್ತೆ ಸಾವನ್ನಪ್ಪಿದರೆ ಇನ್ನೊಂದು ಮನೆಯಲ್ಲಿ ತಾಯಿ ಮಗಳಿಗೆ ಸೋಂಕು ಪತ್ತೆಯಾಗಿದೆ.
ಇವರಿಗೆ ಚಿಕಿತ್ಸೆ ಮುಂದುವರಿದಿದೆ.ಎರಡು ದಿನದ ಹಿಂದೆ ನರಿಕೊಂಬುಗ್ರಾಮದ ನಾಯಿಲದಲ್ಲಿ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಬಂಟ್ವಾಳ ರಥಬೀದಿ ಮತ್ತು ನಾಯಿಲವನ್ನು ಸೀಲ್ ಡೌನ್ ಗೊಳಪಡಿಸಿ ಕಂಟೈನ್ಮಂಟ್ ವಲಯವನ್ನಾಗಿ ಗುರುತಿಸಲಾಗಿದೆ.ಈ ಎರಡು ಪ್ರದೇಶದಲ್ಲಿರುವ ನಾಗರಿಕರಿಗೆ ಸಹಾಯವಾಣಿ ತೆರೆದು ಸ್ವಯಂಸೇವಕರ ಮೂಲಕ ಅಗತ್ಯವಸ್ತು ಪೂರೈಸಲಾಗುತ್ತಿದೆ.
ಮಾದರಿ ಪರೀಕ್ಷೆ:
ಬಂಟ್ವಾಳ ಕಂಟೈನ್ಮಂಟ್ ವಲಯದಲ್ಲಿ ಬಾಕಿ ಉಳಿದಿರುವ ಮನೆಮಂದಿಯ ಮಾದರಿ ಸಂಗ್ರಹ ಕಾರ್ಯ ಮಂಗಳವಾರ ಆರೋಗ್ಯ ಇಲಾಖೆಯಿಂದ ನಡೆದಿದೆ. ೧೦೦ ಕ್ಕು ಅಧಿಕ ಮಂದಿಯ ಮಾದರಿ ಸಂಗ್ರಹ ಸೋಮವಾರ ನಡೆದಿತ್ತು.ಬಾಕಿ ಉಳಿದವರ ಮಾದರಿ ಸಂಗ್ರಹ ಮಂಗಳವಾರ ನಡೆದಿದೆ.ಪುರಸಭೆಯಿಂದ  ನಿತ್ಯ ಹಾಲು ಪೂರೈಕೆಯಾಗುತ್ತಿದೆ. ಮಾರ್ಕೆಟ್ ರಸ್ತೆಯಲ್ಲಿ ಎಂದಿನಂತೆ ಕೆಲ ಅಂಗಡಿ ತೆರೆದಿತ್ತಾದರೂ ಜನಸಂಖ್ಯೆ ಮಾತ್ರ ವಿರಳವಾಗಿತ್ತು.11 ಗಂಟೆಯಾಗುತ್ತಿದ್ದಂತೆ ಅಂಗಡಿಗಳು ಮುಚ್ಚಲ್ಪಟ್ಟವು.

By suddi9

Leave a Reply

Your email address will not be published. Required fields are marked *