ಕಾರ್ಕಳ : ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಹೊಯ್ಗೆಜಡ್ಡು ಪರಿಸರದಲ್ಲಿ ಓಬಯ್ಯ ನಾಯ್ಕ್ ಎಂಬುವವರ ಮನೆಗೆ ಸಿಡಿಲು ಬಡಿದು ಹೆಚ್ಚಿನ ಹಾನಿಯಾಗಿದೆ.ದನಗಳಿಗೆ ಶೇಖರಿಸಿಟ್ಟ ಬೈ ಹುಲ್ಲು ಸಂಪೂರ್ಣವಾಗಿ ಸಿಡಿಲಿನ ಬೆಂಕಿಗೆ ಆಹುತಿಯಾಗಿದೆ.ಮನೆಯ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟು ಮನೆಯ 2 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕಡ್ತಲ ಗ್ರಾ.ಪಂ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ,ಸದಸ್ಯ ಸುಕೇಶ್ ಹೆಗ್ಡೆ ಹಾಗೂ ಮಾಜಿ ಗ್ರಾ.ಪಂ ಉಪಾಧ್ಯಕ್ಷ ದೇವೇಂದ್ರ ಕಾಮತ್ ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳೀಯ ಜನ ಪ್ರತಿನಿಧಿಗಳಿಂದ ಸ್ಪಂದನೆ
ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು,ಶೀಘ್ರದಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು.
– ಅರುಣ್ ಕುಮಾರ್ ಹೆಗ್ಡೆ
ಅಧ್ಯಕ್ಷರು,ಗ್ರಾ.ಪಂ ಕಡ್ತಲ
