ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ತಯಾರಿಯ ಘಟಕಕ್ಕೆ ಮಂಗಳವಾರ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿದ್ದು,ಈ ಸಂಬಂಧ  ಇಬ್ಬರನ್ನು ಬಂಧಿಸಿದ್ದಾರೆ.    ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸರ್ ಪಿಂಟೋ ಮತ್ತು ರೋಶನ್  ಫೆರ್ನಾಂಡಿಸ್ ಬಂಧಿತ ಆರೋಪಿಗಳು.IMG-20200407-WA0115

ಆಗ್ರಾರ್ ಕೋಡಿಯ ಮನೆಯೊಂದರಲ್ಲಿ ಅಕ್ರಮ ಕಳ್ಳಭಟ್ಟಿ ತಯಾರಿಸುವ ಬಗ್ಗೆ  ಖಚಿತ ಮಾಹಿತಿಯ ಮೇರೆಗೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ  ಅಪರಾಧ ಪತ್ತೆದಳ  ಪಿ ಎಸ್ ಐ ಕುಮಾರ್ ಕಾಂಬ್ಳೆ,   ಹಾಗೂ ನಗರ ಠಾಣಾ ಎಸ್.ಐ.ಅವಿನಾಶ್, ಗ್ರಾಮಾಂತರ ಠಾಣಾ   ಎಸ್. ಐ. ಪ್ರಸನ್ನ ಮತ್ತವರ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

ಕಳ್ಳಬಟ್ಟಿ  ತಯಾರಿಸಲು ಬಳಸಿರುವ ಸಾಮಾಗ್ರಿಗಳು,  ಸ್ಕೂಟರ್ ಸಹಿತ  20 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶ ಪಡಿಸಿಕೊಂಡಿದ್ದಾರೆ.   ಪ್ರಕರಣವನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಕೇಸ್ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

 

By suddi9

Leave a Reply

Your email address will not be published. Required fields are marked *