ಬಂಟ್ವಾಳ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ, ಸಿದ್ದಕಟ್ಟೆ, ಬಂಟ್ವಾಳ, ಫರಂಗಿಪೇಟೆ, ಮುಡಿಪು, ಮಾಣಿ, ವಿಟ್ಲಗಳ ಏಳು 108 ಅಂಬ್ಯುಲೆನ್ಸ್ ನ 26 ಸಿಬಂದಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ವತಿಯಿಂದ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರು ತಲಾ 25 ಕೆ.ಜಿ.ಅಕ್ಕಿಯನ್ನು ಬಿ.ಸಿ.ರೋಡ್ ಶಾಸಕರ ಕಚೇರಿ ಯಲ್ಲಿ ವಿತರಿಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಆಂಬುಲೆನ್ಸ್ ನೌಕರರ ಸಂಘದ ದ ಕ.ಇದರ ನರಸಿಂಹ ನಾಯಕ್, ಜಗನ್ನಾಥ ಶೆಟ್ಟಿ , ತಾ.ಪಂ.ಸದಸ್ಯ ಆನಂದ ಶಂಭೂರು ಉಪಸ್ಥಿತರಿದ್ದರು.
