ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕಾರ್ಯಾಚರಿಸುವ ಶುಭ ಬೀಡಿ ಸಂಸ್ಥೆಯ ಮಾಲಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ  ಸೇಸಪ್ಪ ಕೋಟ್ಯಾನ್  ತನ್ನ 1,500 ಬೀಡಿ ಕಾರ್ಮಿಕರಿಗೆ ತಲಾ 25 ಕೆ.ಜಿ ಅಕ್ಕಿ ಮತ್ತು ಧನಸಹಾಯವನ್ನು ವಿತರಿಸಲಾಯಿತು.IMG-20200407-WA0027

ಮಂಗಳವಾರ ಸಂಸ್ಥೆಯ ವಠಾರದಲ್ಲಿ  ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಮಿಕರಿಗೆ ಅಕ್ಕಿ ಮತ್ತು ಧನಸಹಾಯ ವಿತರಿಣೆಗೆ ಚಾಲನೆ ನೀಡಿ ಪ್ರಸಕ್ತ ದಿನದಲ್ಲಿ  ಬೀಡಿ ಕಾರ್ಮಿಕರ ಕಷ್ಟಕ್ಕು ಸ್ಪಂದಿಸುವ ಸಂಸ್ಥೆಯ ಮಾಲಕ ಸೇಸಪ್ಪ ಕೋಟ್ಯಾನ್ ಅವರ ಕಾರ್ಯವನ್ನು ಅಭಿನಂದಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ,ಸಂಸ್ಥೆಯ ಮಾಲಕ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದಂಪತಿ ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *