ಬಂಟ್ವಾಳ: ಹಿಂದೂ ಧರ್ಮದ ರಕ್ಷಣೆ ಯುವಜನಾಂಗದಿದಾಗಬೇಕು, ಧರ್ಮದ ಪ್ರತಿಪಾದನೆ, ಗೌರವದಿಂದ ಕಾಣುವ, ಪರಿಪಾಲನೆ ಮಾಡುವ, ಭೋದನೆ ಮಾಡುವ ಮಹತ್ತರ ಜವಬ್ದಾರಿ ಯುವಜನತೆಯ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರಕಚೇರಿಯ ಯೋಜನಾಧಿಕಾರಿ ದಿನೇಶ್ ಪೂಜಾರಿ ಹೇಳಿದರು. ಬಂಟ್ವಾಳ ತಾ. ಕುರಿಯಾಳ ಗ್ರಾಮದ ದುರ್ಗಾನಗರಜ್ಞಾನ ಜ್ಯೋತಿ ಗೆಳೆಯರ ಬಳಗದ ಪ್ರಥಮ ವರ್ಷದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಸ್ತಿನ ಜೀವನದ ಜೊತೆಗೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಾಗ ಸಂಸ್ಕಾರವನ್ನು ಮರೆಯದಿರಿ ಎಂದು ಹೇಳಿದ ಅವರು ಆಹಂ ತೊರೆದು ಭಜನೆ ಮಾಡಿದಾಗ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಉದ್ದೇಶದಿಂದ ಸಂಘ, ಸಂಸ್ಥೆಗಳ ಉದಯವಾಗಬೇಕು,ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಿದ್ದಕಟ್ಟೆ ಪ್ರೌಢ ಶಾಲಾ ಅಧ್ಯಾಪಕ ಮಹೇಶ್ ವಿ.ಕರ್ಕೇರ,ಮಂಗಳೂರು ಎಂ.ವಿ.ಶೆಟ್ಟಿ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಪವನ್ ಭಂಡಾರಿ, ಪ್ರಗತಿಪರ ಕೃಷಿಕರಾದ ಲೇಖಾಪ್ರಸನ್ನ ಭಂಡಾರಿ , ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿಸಿರೋಡು ವಲಯ ಮೇಲ್ವಿಚಾರಕ ಕೇಶವ, ಗ್ರಾಮಾಭಿವೃದ್ದಿ ಯೋಜನೆಯ ವಲಯ ಅಧ್ಯಕ್ಷ ಶೇಖರ್ ಸಾಮಾನಿ,ಜ್ಞಾನ ಜ್ಯೋತಿ ಗೆಳೆಯರ ಬಳಗದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಪಾಪುದಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಯೋಜನಾಧಿಕಾರಿ ದಿನೇಶ್ ಪೂಜಾರಿ ಅವರನ್ನು ಕೂರಿಯಾಳ ಒಕ್ಕೂಟದ ವತಿಯಿಂದ ಗೌರವಿಸಲಾಯಿತು.ಅಂಗನವಾಡಿ ಕಾರ್ಯಕರ್ತೆ ವನಿತಾ ವಿ.ಬಂಗೇರ ಸ್ವಾಗತಿಸಿ, ಸಂಘದ ಸದಸ್ಯ ನಾಗೇಶ್ ವಂದಿಸಿದರು.
