ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿ ಯುವಮೋರ್ಚಾ ನೂತನ ಅಧ್ಯಕ್ಷರಾಗಿ ಯುವ ಸಂಘಟಕ ಪ್ರದೀಪ್ ಅಜ್ಜಿಬೆಟ್ಟು ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕಿನ ವಿದ್ಯಾರ್ಥಿ ಪ್ರಮುಖ್ ,ಭಜರಂಗದಳದ ತಾಲೂಕು ಸಂಚಾಲಕ , ಅಜ್ಕಿಬೆಟ್ಟು ಸ್ನೇಹಾಂಜಲಿ ಸೇವಾಸಂಘದ ಕ್ರೀಡಾ ಕಾರ್ಯದರ್ಶಿ ,ಶ್ರೀರಾಮ ಭಜನಮಂದಿರ ಇದರ 10 ನೇ ವರುಷದ ಕಾರ್ಯದರ್ಶಿ ,ಶ್ರೀರಾಮ ಭಕ್ತಾಂಜನೆಯ ವ್ಯಾಯಾಮಶಾಲೆ ಇದರ 3 ನೇ ವರುಷದ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯ ಅಧ್ಯಕ್ಷರಾಗಿರುವ ಅವರು ಪ್ರಸ್ತುತ ಭಾರತೀಯ ಯುವಮೋರ್ಚಾ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಂಟ್ವಾಳ ಬಿಜೆಪಿ ಯುವ ವಲಯದಲ್ಲಿ ಸಂಚಲನ ಮೂಡಿಸಿದೆ.ಸಿವಿಲ್ ಇಂಜಿನಿಯರ್ ಮತ್ತು ಸಿವಿಲ್ ಕಾಂಟ್ರಾಕ್ಟರ್ ಆಗಿ ಉದ್ಯಮ ನಡೆಸುತ್ತಿದ್ದಾರೆ.

