ಬಂಟ್ವಾಳ:  ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ  ಸ್ವಸ್ತಿಕ್ ಫ್ರಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 36 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 12 ವರ್ಷದ ಅದ್ದೂರಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ 10 ನೂತನ ವಧು- ವರರು ಹಸೆಮಣೆಯೇರಿದರು.ಇದೇವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ  ನಾಲ್ವರಿಗೆ ‘ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಹಾಗೆಯೇ ಸಾಧಕರಿಗೆ ‘ಸ್ವಸ್ತಿಕ್ ಸಂಭ್ರಮ’ಪುರಸ್ಕಾರ ಪ್ರದಾನ ಮಾಡಲಾಯಿತು. 8

ಶಶಿಕಿರಣ್ ಬೊಮ್ಮಸಂದ್ರ ಬೆಂಗಳೂರು( ಉದ್ಯಮ), ಸತೀಶ್ ಶೆಟ್ಟಿ ಮತ್ತು ಜಗದೀಶ ಶೆಟ್ಟಿ(ಕಂಬಳ), ಎ.ಕೆ.ಸುಂದರ ಸಾಲ್ಯಾನ್ ಬೆಂಗಳೂರು(ಸಮಾಜಸೇವೆ) ಮೋಹನದಾಸ್ ಕೊಟ್ಟಾರಿ (ಸಾಂಸ್ಕೃತಿಕ) ಅವರಿಗೆ    ಸ್ವಸ್ತಿ ಸಿರಿ ಪ್ರಶಸ್ತಿ  ಆದೇರೀತಿ ಲಿಯೋಬಾಸಿಲ್ ಫೆರ್ನಾಂಡಿಸ್ (ಉದ್ಯಮ),ಕು.ಬ್ರಾಹ್ಮಿಮಯ್ಯ (ಸಾಂಸ್ಕೃತಿಕ), ಕು.ಆರಾಧನಾಭಟ್ ನಿಡ್ಡೋಡಿ(ಕಲಾ),ಸ್ವರ್ಣ ಸಂಜೀವಿನಿ ಮಡವು ಪಾಂಡವರಕಲ್ಲು (ಅತ್ಯುತ್ತಮ ಯುವ ಸಂಘಟನೆ), ಮಾನವಿ,ಆಕಾಶ್ ಎಸ್ ,ಗಣೇಶ್ ಕೆ.ಎಸ್, ಮಾ.ಚಿಂತನ್ , ಪ್ರಜ್ಞಾ ಅತ್ತಾಜೆ,ಮಾ.ಸುಹಾಸ್ ಅತ್ತಾಜೆ ಅವರಿಗೆ   ಸ್ವಸ್ತಿಕ್ ಸಂಭ್ರಮವನ್ನು ಪ್ರದಾನಮಾಡಿ ಪುರಸ್ಕರಿಸಲಾಯಿತು. 11

 ವಧು- ವರರ ಮೆರವಣಿಗೆ:

 ವಿವಾಹ ಕಾರ್ಯಕ್ರಮಕ್ಕೆ ಮುನ್ನ ಬಸವನಗುಡಿಯ ಶ್ರೀಬಸವೇಶ್ವರ ದೇವಸ್ಥಾನದ ವಠಾರದಿಂದ ನೂತನ ವಧು-ವರರನ್ನು ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ವೈಭವದ ದಿಬ್ಬಣ ಮೆರವಣಿಗೆಯಲ್ಲಿ ವಿವಾಹ ಮಂಟಪಕ್ಕೆ ಕರೆತರಲಾಯಿತು. ಹಲವಾರು ಗಣ್ಯರ ಸಮ್ಮುಖದಲ್ಲಿ ಪುಂಜಾಲಕಟ್ಟೆ ಠಾಣೆಯ ಎಸ್ ಐ.ಸೌಮ್ಯ ಅವರು ಮೆರವಣಿಗೆಯನ್ನು ಉದ್ಘಾಟಿಸಿದರು. ಬಳಿಕ 11.30 ರ ಶುಭಮುಹೂರ್ತದಲ್ಲಿ   ಪುಂಜಾಲಕಟ್ಟೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾದ ವೇ.ಮೂ.ಶ್ರೀಕೃಷ್ಣ ಭಟ್ ಗುರುವಾಯನಕೆರೆ ಮತ್ತು ಅರ್ಚಕ ತಂಡ ನೂತನ ವಧುವರರಿಗೆ ಗೃಹಸ್ಥಾಶ್ರಮದ ದೀಕ್ಷೇಯನ್ನು ನೀಡಿದರು.16 (1)

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿವಾಹ ಸಮಾರಂಭವನ್ನು ಉದ್ಘಾಟಿಸಿ ನೂತನ ವಧು,ವರರಿಗೆ ಶುಭಹಾರೈಸಿ ಮಾತನಾಡಿ,ಸಾಮೂಹಿಕ ವಿವಾಹದಂತ ಈ ಪಣ್ಯಕಾರ್ಯಕ್ಕೆ ಎಲ್ಲರ  ಸಹಕಾರದ ಅಗತ್ಯವಿದೆ , ಸಪ್ತಪದಿಯಡಿ ಸರಕಾರವು ಸಾಮೂಹಿಕ ವಿವಾಹದ ಸಂಕಲ್ಪವನ್ನು ಮಾಡಿರುವ ಹಿನ್ನಲೆಯಲ್ಲಿ,ಇದಕ್ಕು ಎಲ್ಲರು ಸಹಕರಿಸುವಂತೆ ಕೋರಿದರು. ಸಭಾಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್  ಅಧ್ಯಕ್ಷತೆ ವಹಿಸಿ ಮಾತನಾಡಿ,  ನಮ್ಮ ಸಂಸ್ಕಾರ ಭಾಷಣಕ್ಕೆ ಸೀಮಿತವಾಗದೇ ಅನುಕರಣೆಗೆ ಬರಬೇಕು,ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಂಘಟನೆ,ಯುವ ,ಬಾಲಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು ಯೋಚಿಸಿದೆ ಎಂದರು.

ಅತಿಥಿಯಾಗಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ , ಶ್ರೀ.ಕ್ಷೇ.ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ಎಆರ್ ಟಿಒ ಚರಣ್.ಕೆ., ವಾಮದಪದವು ಪ್ರ.ದ.ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಶೆಟ್ಟಿ,  ಕರ್ನಾಟಕ ತುಳು  ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಪಿಲಾತಬೆಟ್ಟು ಸೇ.ಸ.ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ,  ಮಾತನಾಡಿ ಶುಭಹಾರೈಸಿದರು.

ಪಿಲಾತಬೆಟ್ಟು ಗ್ರಾಪಂ ಚಂದ್ರಶೇಖರ ಶೆಟ್ಟಿ ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಬಂಟ್ವಾಳ ಘಟಕದ ಯೋಜನಾಧಿಕಾರಿ ಪಿ.ಜಯರಾಮ್, ಪುಂಜಾಲಕಟ್ಟೆ  ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ,   ಕಂಬಳದ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು ಅವರು ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪದಾಧಿಕಾರಿಗಳಾದ ರಾಜೇಶ್ ಪಿ.ಪುಂಜಾಲಕಟ್ಟೆ, ಅಬ್ದುಲ್ಲಾ.ಪಿ.,ಜಯರಾಜ್ ಅತ್ತಾಜೆ ಮೊದಲಾದವರು ವೇದಿಕೆಯಲ್ಲಿದ್ದರು.

ಕ್ಲಬ್ ನ ಸ್ಥಾಪಕಾಧ್ಯಕ್ಷ ,ಜಿಪಂ ಸದಸ್ಯ ತುಂಗಪ್ಪ ಬಂಗೇರ ಪ್ರಸ್ತಾವಿಸಿ, ಇದುವರೆಗೆ ನಡೆದ ಸಾಮೂಹಿಕ ವಿವಾಹಗಳಲ್ಲಿ ಒಟ್ಟು 486 ವಿವಾಹಗಳನ್ನು ನೆರವೇರಿಸಲಾಗಿದೆ. ಸಾಮೂಹಿಕ ವಿವಾಹಕ್ಕೆ ಒತ್ತು ನೀಡುವ ಕೆಲಸ ಸರಕಾರದಿಂದಾಗಬೇಕು ಎಂದರು.  ಕ್ಲಬ್ ನ  ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು.  ನಿವೃತ್ತ ಅಧ್ಯಾಪಕ ರಾಮಚಂದ್ರ ರಾವ್ ,ಕು.ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.                                ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಾಮದಪದವು ಸ.ಪ್ರ.ದ.ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಯಕ್ಷಗಾನ,ತುಳುನಾಟಕ ನಡೆಯಿತು.

By suddi9

Leave a Reply

Your email address will not be published. Required fields are marked *