ಕಲ್ಲಡ್ಕ: ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಫೆ. 25ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ವೈದಿಕ ವಿ„ ವಿಧಾನಗಳು ನಡೆದವು. ಫೆ. 24ರಂದು ಸಂಜೆ ನೇತ್ರಾವತಿ ನದಿಯಿಂದ ಜಲ ಕಲಶ ಆಗಮನ, ರಾತ್ರಿ ಹೋಮಾದಿಗಳು, ಫೆ. 25ರಂದು ದೇವರಿಗೆ ಅಲಂಕಾರ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಸಪಲ್ಯ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪಾಣೆಮಂಗಳೂರು ಶ್ರೀ ವೀರವಿಠಲ ದೇವಸ್ಥಾನದದ ಆಡಳಿತ ಸಮಿತಿ ಪದಾ„ಕಾರಿಗಳು, ನಾಟಿ ಶ್ರೀ ಕೊದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯಿನಿ ದೇವಸ್ಥಾನದ ಪದಾ„ಕಾರಿಗಳು ಭೇಟಿ ನೀಡಿದ್ದರು. ಕ್ಷೇತ್ರದ ಸೇವಾ ಟ್ರಸ್ಟ್ ಪದಾ„ಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಧಾನ ಕಾರ್ಯದರ್ಶಿ ರಾಜಾ ಬಂಟ್ವಾಳ ತಿಳಿಸಿದ್ದಾರೆ.
