ಕಿನ್ನಿಗೋಳಿ :  ಯುಗಪುರುಷ ಮಾಸಿಕ ಪತ್ರಿಕೆಯ ದಸರಾ ದೀಪಾವಳಿ ವಿಶೇಷಾಂಕವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನದಲ್ಲಿ ಬಿಡುಗಡೆಗೊಳಸಲಾಗಿತು, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅದ್ಯಕ್ಷ ಹರಿಕ್ರಷ್ಣ ಪುನರೂರು ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು, ನಂತರ ಮಾತನಾಡಿದ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ನಿರಂತರ ೬೭ ವರ್ಷಗಳಿಂದ ಪ್ರಕಟಗೊಳ್ಳುತಿರುವ ಯುಗಪುರುಷ ಪತ್ರಿಕೆ, ನಾಡಿನೆಲ್ಲೆಡೆಯ ಸಾಹಿತಿಗಳನ್ನು ಆಕರ್ಷಿಸುತ್ತಿದೆ, ದಿ. ಕೊ. ಅ ಉಡುಪ ಅವರು ಸ್ಥಾಪಿಸಿದ ಪತ್ರಿಕೆಯನ್ನು ಅವರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ಇಂದಿಗೂ ನಡೆಯುತ್ತಿದೆ ಎಂಬ ಸಂತೋಷ ನಮಗಿದೆ ಎಂದರಿ ಈ ಸಂದರ್ಭದಲ್ಲಿ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಯಣ ಅಸ್ರಣ್ಣ, ಅನಂತಾಸ್ರಣ್ಣ, ಕೆ.ಜಿ. ಮಲ್ಯ, ಉಮೇಶ್ ರಾವ್ ಎಕ್ಕಾರು, ಸೊಂದ ಬಾಸ್ಕರ್ ಭಟ್, ಕಿರಣ್ ಮಂಜನ್ ಬೈಲ್ , ದೇವಿ ಪ್ರಸದ್ ಶೆಟ್ಟಿ,  ಅಜಾರು ನಾಗರಾಜರಾಯರು ಮುಂತಾದವರು ಉಪಸ್ಥಿತರಿದ್ದರು.

yugapurusha pustaka bidugade

By suddi9

Leave a Reply

Your email address will not be published. Required fields are marked *