ಬಂಟ್ವಾಳ:ಇಲ್ಲಿನ ರಾಯಿ ಗ್ರಾಮದ ಮೈಂದಬೆಟ್ಟು ಎಂಬಲ್ಲಿ ಮಂಗಳೂರಿನ ವಸ್ತ್ರೋದ್ಯಮಿಯೊಬ್ಬರು ನಿರ್ಮಿಸಿದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂತರನ್ನು ಕರೆಸಿ ‘ಧಾರ್ಮಿಕ ಸಂಸತ್ತು’ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.ಮಂಗಳೂರು ಪುರಭವನ ಬಳಿ ವಸ್ತ್ರೋದ್ಯಮ ನಡೆಸುತ್ತಿರುವ ದಿನೇಶ್ ಎಂ.ಪಿ. ಎಂಬವರು ಶನಿವಾರ ಸಂಜೆ ತನ್ನ ಹುಟ್ಟೂರು ರಾಯಿ ಗ್ರಾಮದ ಮೈಂದಬೆಟ್ಟುವಿನಲ್ಲಿ ಗೃಹಪ್ರವೇಶ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಕರಿಂಜೆ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

20btl-MAINDABETTU
ಪ್ರಸಕ್ತ ಸಮಾಜದಲ್ಲಿ ಮದರಂಗಿ ಶಾಸ್ತ್ರ, ಗೃಹಪ್ರವೇಶ ಮತ್ತಿತರ ಸಾತ್ವಿಕ ಆಚಾರ ಪದ್ಧತಿಯಲ್ಲಿ ಪಾಶ್ಚಾತ್ಯ ಸಂಸ್ಕøತಿ ನುಸುಳಿಕೊಂಡಿದೆ. ಮದ್ಯ ಸೇವನೆ ಮತ್ತು ಮಾಂಸದೂಟದ ಜೊತೆಗೆ ಅಶ್ಲೀಲ ನೃತ್ಯಕ್ಕೆ ಬದಲಾಗಿ ಇಂತಹ ಸಾತ್ವಿಕ ವಿಚಾರ ತಿಳಿಸುವ ಧಾರ್ಮಿಕತೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸನಾತನ ಸಂಸ್ಥೆ ಪ್ರಚಾರಕ ರಮಾನಂದ ಗೌಡ ಮತ್ತು ವಕ್ತಾರೆ ಲಕ್ಷ್ಮೀ ಪೈ ಮಾತನಾಡಿ, ದೇಶೀಯ ಸಂಸ್ಕøತಿಗೆ ವಿದೇಶೀಯರು ಕೂಡಾ ಆಕರ್ಷಿಸುತ್ತಿರುವ ಸಂದರ್ಭದಲ್ಲಿ ನಾವು ಪಾಶ್ಚಾತ್ಯ ಸಂಸ್ಕøತಿಯ ದಾಸರಾಗಬಾರದು ಎಂದರು. ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಮಾರ್ಗದರ್ಶನ ನೀಡಿದರು. ಕಂಕನಾಡಿ ಗರಡಿ ಮುಖ್ಯಸ್ಥ ಕೆ.ಚಿತ್ತರಂಜನ್, ಪ್ರಸಾದ್ ಅತ್ತಾವರ ಮತ್ತಿತರರು ಇದ್ದರು. ಸುಬ್ರಹ್ಮಣ್ಯ ಭಟ್ ಮಂಚಿ ಮತ್ತು ರಾಧಾಕೃಷ್ಣ ಭಟ್ ಪೆದಮಲೆ ವೇದ ಮಂತ್ರ ಪಠಿಸಿದರು.
ವಿಜಯ ಕುಮಾರ್ ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ವಂದಿಸಿದರು. ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *