ಬಂಟ್ವಾಳ‌: ಕಾವಳಪಡೂರು ಪ್ರಾಥಮಿಕ ಕೃಷಿ  ಪತ್ತಿನ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ಮುಂದಿನ ಐದುವರ್ಷದ ಅವಧಿಗೆ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು  ಅಧ್ಯಕ್ಷರಾಗಿ ,ಅಮ್ಮು ರೈ ಹರ್ಕಾಡಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
IMG-20200122-WA0025
ನಿಯಮಿತದ ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರೆ,ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸಂಘದ ಕಚೇರಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರ.ದ.ಸಹಾಯಕ ವಿಲಾಸ್ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ನಿರ್ದೇಶಕರಾದ ಪಿ.ಜಿನರಾಜ ಆರಿಗ,ಕೆ.ಚಂದಪ್ಪ ಪೂಜಾರಿ,ಕೆ.ಪೊಂಕ್ರ,ಬೆನಡಿಕ್ಟ್ ಡಿಸೋಜ,ಬಿ.ಶಿವಪ್ರಸಾದ್,ರಾಮಣ್ಣನಾಯ್ಕ,ಗಂಗಾಧರ ಪೂಜಾರಿ,ಚಂದಪ್ಪ ಮೂಲ್ಯ,ವಿಜಯ ಪೂಜಾರಿ,ವೇದಾವತಿಯಾನೆ ಸಂಧ್ಯಾ ,ಸವಿತಾ ಬಿ.ಎಸ್.ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ಸತತ ನಾಲ್ಕು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ‌.

By suddi9

Leave a Reply

Your email address will not be published. Required fields are marked *