ನವದೆಹಲಿ : ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಜನವರಿ 8 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದ ಜಾರಿಗೊಳಿಸಿದ್ದ ಕಾರ್ಮಿಕ ಸುಧಾರಣೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜನವರಿ 8 ರ ಬುಧವಾರ ಭಾರತ್ ಬಂದ್ ಗೆ ಕರೆ ನೀಡಿವೆ. ಬಂದ್ ಗೆ ಬ್ಯಾಂಕ್ ಉದ್ಯೋಗಿಗಳು,ಖಾಸಗಿ ಸಂಸ್ಥೆಗಳು,ಶಿಕ್ಷಕರು, ಸರ್ಕಾರಿ ನೌಕರರು, ಐಟಿ ಕಂಪನಿಗಳು, ಸೇರಿ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಲಿದೆ ಎನ್ನಲಾಗುತ್ತಿದೆ.

chh

ಕಾರ್ಮಿಕ ಸಂಘನೆಗಳು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದು ಇದರ ಪ್ರಕಾರ ಕನಿಷ್ಠ ವೇತನ 24 ಸಾವಿರ ರೂ.ಗೆ ಹೆಚ್ಚಿಸಬೇಕು, 44 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ 4 ಮಸೂದೆ ಮಂಡಿಸುವುದನ್ನು ಕೈಬಿಡಬೇಕು,ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು. ಎನ್ ಆರ್ ಸಿ, ಸಿಎಎ ಸ್ಥಗಿತಗೊಳಿಸಬೇಕು ಎನ್ನುವ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿವೆ.

By suddi9

Leave a Reply

Your email address will not be published. Required fields are marked *