ನವದೆಹಲಿ : ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಭರ್ಜರಿಗುಡ್ ನ್ಯೂಸ್ ನೀಡಿದೆ, ನೆರೆ ಪರಿಹಾರದ 2 ನೇ ಕಂತಿನ ಹಣವಾಗಿ 1869.85 ಕೋಟಿ ರೂ. ಬಿಡುಗಡೆಗೆ ಮಾಡುತ್ತೇವೆಂದು ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಒಟ್ಟು 5908.56 ಕೋಟಿ ರೂ. ಪರಿಹಾರ ನೀಡಲು ತೀರ್ಮಾನಿಸಿದೆ.
ನೆರೆಯಿಂದಾಗಿ ಸುಮಾರು 38,00ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜು ವರದಿಯನ್ನು ಕೇಂದ್ರಕ್ಕೆ ನೀಡಿತ್ತು. ಈಗಾಗಲೆ ಮೊದಲನೇ ಕಂತಿನಲ್ಲಿ 1200 ಕೋಟಿ ರೂ. ಪರಿಹಾರ ಘೋಷಿಸಿತ್ತು. ಇದೀಗ ಮತ್ತೆ 2 ನೇ ಕಂತಿನ ಹಣವಾಗಿ 1869.85 ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನುಳಿದ ರಾಜ್ಯಗಳಾದ ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರ 956.93 ಕೋಟಿ ರೂ., ಅಸ್ಸಾಂಗೆ 616.63 ಕೋಟಿ ರೂ,ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ.ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ ಮತಾತು ತ್ರಿಪುರಾಕ್ಕೆ 63.32 ಕೋಟಿ ರೂ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೊಷಿಸಿದೆ. ವರದಿಯ ಪ್ರಕಾರ ರಾಜ್ಯಕ್ಕೆ 3800 ಕೋಟಿ ರೂ. ಸಿಗಲಿದೆ ಎಂದು ನಿರೀಕ್ಷಿಸಲಾಗಿದ್ದರು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಒಟ್ಟು 3069 ಕೋಟಿ ರೂ. ಪರಿಹಾರ ನೀಡಿದ್ದು ರಾಜ್ಯದ ಜನತೆಗೆ ಸಂತಸ ತಂದಿದೆ.

