ನವದೆಹಲಿ : ಇನ್ನು ಮುಂದೆ ಬೇರೆ ರಾಜ್ಯಗಳಿಗೆ ತೆರಳಿದರೆ, ಪಡಿತರ ಸೇವೆಯನ್ನು ಪಡೆಯಲು ಹೋಸ ಪಡಿತರ ಕಾರ್ಡ್ ಮಾಡಬೇಕೆಂಬ ಚಿಂತೆ ಇದ್ದರೆ ಬಿಟ್ಟು ಬಿಡಿ. ಯಾಕೆಂದರೆ ಹೊಸ ವರ್ಷದ ದಿನವಾದ ಜನವರಿ 1ರಂದು ಕರ್ನಾಟಕ ಸೇರಿ ದೇಶಾದ್ಯಂತ ಒಟ್ಟು12 ರಾಜ್ಯಗಳಲ್ಲಿ ಏಕರೂಪದ ರೇಷನ್‌ ಕಾರ್ಡ್‌ ಇರುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಏಕ ದೇಶ, ಏಕ ಪಡಿತರ ಚೀಟಿ ಯೋಜನೆಯಡಿಯಲ್ಲಿರುವ ರಾಜ್ಯಗಳು:

ಈ ಯೋಜನೆಯು ಕರ್ನಾಟಕವಷ್ಟೇ ಅಲ್ಲದೆ, ಕೇರಳ,ಆಂಧ್ರಪ್ರದೇಶ, ತೆಲಂಗಾಣ,ಗೋವಾ, ಮಧ್ಯಪ್ರದೇಶ, ಜಾರ್ಖಂಡ್‌, ತ್ರಿಪುರಾ, ಮಹಾರಾಷ್ಟ್ರ, ಹರ್ಯಾಣ,ಗುಜರಾತ್‌ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಯೋಜನೆಗೆ ಚಾಲನೆ ದೊರಕಿದೆ. ಅಲ್ಲದೆ ಜೂನ್‌ 1ರಿಂದ ದೇಶದ ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಈ ಯೋಜಯಡಿಯಲ್ಲಿ ಸೇರಿಸಿಕೋಳ್ಳಲಿದೆ.

2018081313-205x300
ಏಕ ದೇಶ, ಏಕ ಪಡಿತರ ಚೀಟಿ ಯೋಜನೆಯ ಪ್ರಾಮುಖ್ಯತೆಗಳು:

ಕೆಲಸಕ್ಕೆಂದು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುವವರು ಬೇರೆ ರಾಜ್ಯದಲ್ಲಿ ಹೊಸ ರೇಷನ್‌ ಕಾರ್ಡ್‌ ಪಡೆಯಬೇಕಾಗುತ್ತದೆ. ಆದರೆ ‘ಏಕ ದೇಶ-ಏಕ ಪಡಿತರ ಚೀಟಿ’ ಯೋಜನೆಯಿಂದಾಗಿ ದೇಶದ ಯಾವುದೇ ರಾಜ್ಯಕ್ಕೆ ಹೋದರು ಹೊಸ ಪಡಿತರ ಚೀಟಿ ಪಡೆಯಬೇಕಿಲ್ಲ. ತಮ್ಮ ರಾಜ್ಯದ ರೆಷನ್ ಕಾರ್ಡನ್ನೆ ಬಳಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಇರುವ ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ರೇಷನ್‌ ಪಡೆಯಬಹುದಾಗಿದೆ. ಆಹಾರ ಭದ್ರತಾ ಕಾಯ್ದೆಯಡಿ ಸುಮಾರು 81.35 ಕೋಟಿ ಜನರಿಗೆ ರೇಷನ್‌ ವಿತರಿಸಬೇಕು ಎಂದು ಸರ್ಕಾರ ಗುರಿ ಇಟ್ಟುಕೊಂಡಿದ್ದು , ಈಗಾಗಲೆ 75 ಕೋಟಿ ಫಲಾನುಭವಿಗಳು ಏಕ ದೇಶ, ಏಕ ಪಡಿತರ ಚೀಟಿ ಆಯ್ಕೆಯಾಗಿದ್ದಾರೆ. ಈಗಾಗಲೇ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಅದೇ ಚೀಟಿಯ ಅಧಾರದಲ್ಲಿ ‘ಏಕ ದೇಶ-ಏಕ ರೇಷನ್‌ ಕಾರ್ಡ್‌’ ಅಡಿ ಹೊಸ ಪಡಿತರ ಚೀಟಿ ಪಡೆಯಬೇಕು ಯಾಕೆಂದರೆ,ಹೋಸ ಮಾದರಿಯ ಚೀಟಿಯಲ್ಲಿ ಕಾರ್ಡ್‌ ಸಂಖ್ಯೆ ಕಡ್ಡಾಯವಾಗಿ 10 ಅಂಕಿಗಳದ್ದಾಗಿರಬೇಕು. ಮೊದಲ ಎರಡು ಡಿಜಿಟ್‌ಗಳು ರಾಜ್ಯದ ಕೋಡ್‌ ಹೊಂದಿರಬೇಕು. ನಂತರ ರೇಷನ್‌ ಕಾರ್ಡುದಾರನ ಸಂಖ್ಯೆ ಇರಬೇಕು.ರೇಷನ್‌ ಕಾರ್ಡ್‌ನಲ್ಲಿ ಕಾರ್ಡುದಾರನ ವಿವರವಿರಬೇಕು, ಎಲ್ಲಾ ರಾಜ್ಯಗಳಲ್ಲೂ ಕಾರ್ಡ್‌ ಬಳಕೆ ಮಾಡುವಂತಾಗಲು ದ್ವಿಭಾಷೆಯಲ್ಲಿ ಈ ಕಾರ್ಡನ್ನು ಸಿದ್ಧಗೊಳ್ಳಬೇಕಲ್ಲದೆ, ಪಡಿತರನ ಮಾತೃಭಾಷೆಯ ಜತೆಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪೂರ್ಣ ವಿವರಗಳನ್ನು ಪಡಿತರ ಚೀಟಿಯಲ್ಲಿ ನಮೂದಿಸ ಬೇಕು. ಇನ್ನು ಹೊಸದಾಗಿ ರೇಷನ್‌ ಕಾರ್ಡ್‌ಗೆ ಅರ್ಜಿ ಹಾಕಿದರೆ ಈ ಹೊಸ ಮಾದರಿಯ ಪಡಿತರ ಚೀಟಿಯನ್ನೇ ಕೊಡಲಾಗುತ್ತದೆ.

By suddi9

Leave a Reply

Your email address will not be published. Required fields are marked *