ನವದೆಹಲಿ:  ಕೇಂದ್ರ ಗೃಹ ಸಚಿವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ ಅಮಿತ್‌ ಶಾಷ ಮುಂದಿನ ವರ್ಷದಲ್ಲಿ ಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯಲ್ಲಿ ತಾನೇ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ. ಇದಕ್ಕೆ ಪೂರ್ವಭಾವಿ ಸಿದ್ದತೆ ಎಂಬಂತೆ ಶಾ ಬಂಗಾಳಿ ಮತ್ತು ತಮಿಳು ಭಾಷೆಯನ್ನು ಕಲಿಯುವುದರ ಮೂಲಕ ಜನ ಮನ ಗೆಲ್ಲಲು ಮುಂದಾಗಿದ್ದಾರೆಂದು ವರದಿ ಮಾಡಲಾಗಿದೆ.

ದೇಶದಲ್ಲಿ ಬಿಜೆಪಿ ಬಲವಾದ ಬೇರೂರಲು ಅಮಿತ್‌ ಶಾ ಪಾಲು ಪ್ರಮುಖವಾಗಿದೆ. ಅದೇರೀತಿ ಶಾ ತನ್ನ ಬತ್ತಳಿಕೆಯಲ್ಲಿರು ಈಗ ಹೊಸ ಶಸ್ತ್ರವೊಂದನ್ನು ಬಿಡಲು ಮುಂದಾಗಿದ್ದಾರೆ..! ಅದುವೇ ಭಾಷಾ ಅಸ್ತ್ರ…! ಬಂಗಾಳಿ ಮತ್ತು ತಮಿಳು ಭಾಷೆಯನ್ನು ಕಲಿಯುವುದರ ಮೂಲಕ ಮುಂದಿನ ವರ್ಷದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಕಾಂಗ್ರೆಸ್‌ ಅನ್ನು ಸೋಲಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೊಸ ಪ್ರಯೋಗವನ್ನು ಆರಂಭಿಸಿದ್ದಾರೆ ಅಮಿತ್ ಶಾ.

Amit-shah_1

ಈಗಾಗಲೇ ಶಾ ಬಂಗಾಳಿ ಭಾಷೆ ಕಲಿಯಲು ಆರಂಭಿಸಿದ್ದು ಇದರ ಜೊತೆಗೆ ತಮಿಳು ಹಾಗು ಇನ್ನೂ 3 ಭಾಷೆಯನ್ನು ಕಲಿಯಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಶಿಕ್ಷಕರನ್ನೂ ನೇಮಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಮಾತೃ ಭಾಷೆಯಲ್ಲಿ ಮಾತನಾಡಿದರೆ ಜನರನ್ನು ಬಲು ಬೇಗ ತಲುಪಬಹುದು. ಹಾಗಾಗಿ ಬಂಗಾಳಿ ಕಲಿಯುವುದು ಅನಿವಾರ್ಯವಾಗಿದೆ ,ಅದರ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದು ನಿರ್ಧರಿಸಿದ್ದಾರೆ. ಅದಲ್ಲದೆ ತಮಿಳುನಾಡಿನಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆಯ ನಡೆಯಲಿದೆ.

ಅಲ್ಲಿ ಬಿಜೆಪಿಗೆ ಎಐಎಡಿಎಂಕೆ ಮಿತ್ರ ಪಕ್ಷ. ಆದರೆ ವಿಪಕ್ಷಗಳಾದ ಡಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ತಮಿಳು ಭಾಷೆಗೆ ಹೆಚ್ಚು ಒತ್ತು ನೀಡುತ್ತಿವೆ. ಜೊತೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಬೇರೆ ಪಕ್ಷಗಳನ್ನು ವಿಧಾನಸಭೆಯಲ್ಲಿ ಅಧಿಕಾರಕ್ಕೆ ತಂದ ಉದಾಹರಣೆಯೇ ಇಲ್ಲ.ಹೀಗಾಗಿ ಆ ಭಾಷೆಯನ್ನೂ ಕಲಿತು ಅಲ್ಲಿನ ಜನರ ಗಮನ ಸೆಳೆಯಲು ಶಾ ಪಣ ತೊಟ್ಟಿದ್ದಾರೆ. ಅಮಿತ್‌ ಶಾನ ಈ ಹೊಸಾ ಚುನಾವಣಾ ರಣತಂತ್ರ ಎಷ್ಟರ ಮಟ್ಟಿಗೆ ಯಶಸ್ವಿ ಕಾಣುತ್ತದೆಂದು ಕಾದುನೋಡಬೇಕಾಗಿದೆ.

By suddi9

Leave a Reply

Your email address will not be published. Required fields are marked *