ಬಂಟ್ವಾಳ: ಬಂಟ್ವಾಳ ತಾ. ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವೀ ಕ್ಷೇತ್ರದಲ್ಲಿ 2020ನೇ ಇಸವಿ ಜ.12ರಿಂದ ಜ.19ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಸೋಮವಾರ ಶ್ರೀ ಕ್ಷೇತ್ರದಲ್ಲಿ ಜರಗಿತು.

ದೇವಸ್ಥಾನದ ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ, ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಅವರು ಮಾತನಾಡಿ, ಪುರಾಣೈತಿಹ್ಯ ಹೊಂದಿರುವ ದೇವಾಲಯ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಪಾವನ ಕ್ಷೇತ್ರವಾಗಿದೆ. ಬ್ರಹ್ಮ ಕಲಶೋತ್ಸವ ಪ್ರಯುಕ್ತ ಒಟ್ಟು 1.20 ಕೋ.ರೂ. ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಪ್ರಸ್ತುತ ಕಲ್ಯಾಣ ಮಂಟಪದ ವಿಸ್ತರಣೆ, ಭೋಜನ ಶಾಲೆಯ ನವೀಕರಣ, ಕಲ್ಯಾಣ ಮಂಟಪ ಛಾವಣಿಯ ಬದಲಾವಣೆ, ದೇವಸ್ಥಾನದ ಇತರ ದುರಸ್ತಿ ಕಾರ್ಯ ನಡೆಯುತ್ತಿದೆ. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉಳಿ ಗ್ರಾ. ಪಂ.ಅಧ್ಯಕ್ಷೆ ಧೀನಾಕ್ಷಿ ಮಲ್ಯೋಡಿ, ಜೀರ್ಣೋದ್ಧಾರ ಸಮಿತಿ ಪದಾ„ಕಾರಿಗಳಾದ ಪಿ.ರಾಮಯ್ಯ ಭಂಡಾರಿ, ಇ.ನಾರಾಯಣ ರೈ ಅಟ್ಟದಡ್ಕ, ಎ.ಸಂಜೀವ ಗೌಡ ಅಗಲ, ಉತ್ಸವ ಸಮಿತಿ ಅಧ್ಯಕ್ಷ ಪಿ.ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮೇಲ್ವಿಚಾರಕಿ ಭವಾನಿ, ಪ್ರಮುಖರಾದ ಬಾಬು ಮಾಸ್ತರ್ ಕೋಂಗುಜೆ, ಸಂಪತ್ ಕುಮಾರ್ ಶೆಟ್ಟಿ, ಜಯ ಮಾಸ್ತರ್ ಪಾದೆ, ಜಗನ್ನಾಥ ಶೆಟ್ಟಿ, ಸುರೇಶ್ ಮೈರ,ಸಂಜೀವ ಪೂಜಾರಿ ಕೇರ್ಯ, ಸುಂದರ ಶೆಟ್ಟಿ ಪುರ ಗೋಳಿತ್ತೊಟ್ಟು, ಗುರು ಪ್ರಕಾಶ್, ಮುತ್ತಪ್ಪ ಗೌಡ, ಶೇಖರ ಪೂಜಾರಿ ಕಕ್ಯಗುತ್ತು, ಶಿವಪ್ಪ ಪೂಜಾರಿ ಬರೆ, ಯತೀಂದ್ರ ಚೌಟ,ನವೀನ ಶೆಟ್ಟಿ ಕಕ್ಯ, ಜಯಾನಂದ ಕೇರ್ಯ, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ಪದ್ಮನಾಭ ರೈ, ಶ್ರೀನಿವಾಸ ಜಾರಿಗೆ, ತಾರಾನಾಥ ಅಂಚನ್, ಸತೀಶ್ ಸುವರ್ಣ, ತುಷಾರ್ ಭಂಡಾರಿ, ಗುರು ಪ್ರಸಾದ್ ರೈ, ಚರಣ್ ಕಂರ್ಬಡ್ಕ, ಪವನ್ ಕುಮಾರ್, ಚಂದ್ರಹಾಸ ಮಾಸ್ತರ್, ಡೀಕಯ್ಯ ಸಾಲ್ಯಾನ್, ಚೆನ್ನಪ್ಪ ಉಡ್ಕುಂಜ, ತಿಲಕ್ ಸುಧೆಕ್ಕಾರ್, ರವಿ ಶೆಟ್ಟಿ ಬೋಳ್ಯ,ಬಾಬು ಗೌಡ ಅಗಲ, ರಾಮಪ್ಪ ಪೂಜಾರಿ ಕಕ್ಯಪದವು ಮತ್ತಿತರರು ಉಪಸ್ಥಿತರಿದ್ದರು.
ಉಳಿ ದಾಮೋದರ ನಾಯಕ್ ಅವರು ಸ್ವಾಗತಿಸಿದರು. ಮೇನೇಜರ್ ವೀರೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
