ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜಿನಲ್ಲಿ ಯುನೈಟೆಡ್ ನೇಷನ್ಸ್ ಡೆವೆಲಪ್‍ಮೆಂಟ್ ಪ್ರೊಗ್ರಾಮ್ ಮತ್ತು ನೆಹರು ಯುವಕ ಕೇಂದ್ರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನದಂದು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮಾನವೀಯತೆಯೇ ಎಲ್ಲಾ ಧರ್ಮಗಳ ಅಧಾರ್ ಕಾರ್ಡ್.

DSC_9127ಆದರೆ ಬಹುತೇಕ ಮಂದಿ ಅವರವರ ಧರ್ಮಗ್ರಂಥಗಳನ್ನು ಅಭ್ಯಯಿಸದೇ ಮಧ್ಯವರ್ತಿಗಳಿಂದ ಕೇಳುವುದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಎಲ್ಲಾ ಅರ್ಜಿ ನಮೂನೆಗಳಿಂದ ಜಾತಿ, ಧರ್ಮದ ಕಲಂ ಅನ್ನು ತೆಗೆಯಬೇಕು. ಅದು ಸಾಧ್ಯವಾಗಬೇಕಾದರೆ ಯುವ ಸಮುದಾಯ ಸಮಾಜದ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸಬೇಕಾಗುತ್ತದೆ ಎಂದರು. ಸಮಾಜ ಸೇವೆ ಮಾಡಲು ಪ್ರತೀಯೊಬ್ಬರಿಗೂ ಅವಕಾಶವಿದೆ. ಆದ್ದರಿಂದ ಪ್ರತೀಯೊಬ್ಬರೂ ವಿಶ್ವಸಂಸ್ಥೆಯ ಸ್ವಯಂಸೇವಕರ ಸಂಘಟನೆ ಸೇರಬೇಕು ಎಂದು ಮನವಿ ಮಾಡಿದರು.

DSC_9094ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಲೆಫಿû್ಟನೆಂಟ್ ಕರ್ನಲ್ ಗ್ರೇಸಿನ್ ಸೀಕ್ವೇರಾ ಮಾತು ಮತ್ತು ಕೃತಿಯನ್ನು ಒಂದಾಗಿ ಇಟ್ಟುಕೊಂಡಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು. ಅತಿಥಿಗಳನ್ನು ಗಾರ್ಡ್ ಆ¥sóï ಹಾನರ್ ನೊಂದಿಗೆ ಎನ್‍ಸಿಸಿ ವಿಧ್ಯಾರ್ಥಿಗಳು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚಂದ್ರಮೋಹನ್ ಮರಾತೆ, ಶ್ರೀಮತಿ ಗಾಯತ್ರಿ, ಯುಎನ್‍ಡಿಪಿಯ ಸಂಚಾಲಕ ರಘುವೀರ್ ಸೂಟರ್ ಪೇಟೆ ಮತ್ತು ಇನ್ನೂರಕ್ಕೂ ಹೆಚ್ಚು ವಿಧ್ಯಾರ್ಥಿನಿಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *