ಬಂಟ್ವಾಳ : ಸೇವಾ ಮನೋಭಾವ ಮತ್ತು ತ್ಯಾಗ ಒಂದನ್ನೊಂದು ಅವಲಂಬಿತವಾಗಿದೆ. ಶಿಬಿರಾರ್ಥಿಗಳು ಹೊಸ ವಾತಾವರಣದಲ್ಲಿ ಹೊಂದಿಕೊಂಡು ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯಂತಹ ವಿಶೇಷ ಶಿಬಿರವು ಸಹಕಾರಿಯಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ನುಡಿದರು. ಇವರು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಪಿಲಿಪ್ಪೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನಡೆದ ಸಮಾರೋಪ ಭಾಷಣದಲ್ಲಿ ಮಾತನಾಡುತ್ತಾ ಶ್ರಮವನ್ನೇ ಇಷ್ಟಪಡದ ಯುವ ಪೀಳಿಗೆಗೆ ಶ್ರಮದ ಮಹತ್ವ, ವ್ಯಕ್ತಿತ್ವ ನಿರ್ಮಾಣ, ಮಾನವತೆಯನ್ನು ಬೆಳೆಸುವ ಒಂದು ಸಂಘಟನೆ ರಾಷ್ಟ್ರೀಯ ಸೇವಾಯೋಜನೆ.

IMG-20191130-WA0002

ಕುಂಡಡ್ಕ ಎನ್ನುವ ಪುಟ್ಟ ಕೃಷಿ ಅವಲಂಬಿತ ಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿಯಾಗುವ ಒಡ್ಡುಗಳ ನಿರ್ಮಾಣವು ಈ ಶಿಬಿರದಲ್ಲಿ ನಡೆದಿರುವುದು ವಿಶೇಷ ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ವಿಟ್ಲ ಸೀಮೆಯ ಗುರಿಕಾರ ಕೆ.ಟಿ ವೆಂಕಟೇಶ್ವರ ಭಟ್ ನೂಜಿ ಇವರು ಮಾತನಾಡಿ ಜಲಪೂರಣದಂತಹ ಕೆಲಸವು ನೀರಿನ ಮಹತ್ವವನ್ನು ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಈ ಶಿಬಿರದಿಂದ ನಡೆದಿದೆ ಎಂದರು. ವೇದಿಕೆಯಲ್ಲಿ ಕುಡ್ವ ಮನೆತನದ ಯೋಗೀಶ್  ಕುಡ್ವ, ಗ್ರಾಮ ಸಮೃದ್ಧಿ ಸಮಿತಿ ಇದರ ಅಧ್ಯಕ್ಷ ಈಶ್ವರ  ನಾಯ್ಕ, ಇಡ್ಕಿದು ಗ್ರಾಮಪಂಚಾಯತ್ ಇದರ ಅಧ್ಯಕ್ಷ ಚಂದ್ರಾವತಿ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಸಂಚಾಲಕ ವಸಂತ ಮಾಧವ ಇವರು ಉಪಸ್ಥಿತರಿದ್ದರು. ಶಿಬಿರದ ವರದಿಯನ್ನು ಯೋಜನಾಧಿಕಾರಿ ಹರೀಶ್ ಎ ಇವರು ಮಂಡಿಸಿದರು. ಶಿಬಿರದಲ್ಲಿ 60 ಶಿಬಿರಾರ್ಥಿಗಳು ಹಾಗೂ ಉಪನ್ಯಾಸಕರಾದ ಗಂಧರ್ವ, ಸಚಿನ್, ಶುಭಲತಾ, ಲತಾಶ್ರೀ ಇವರು ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳಾದ ಪುನೀತ್, ಧನ್ಯಶ್ರೀ, ವೇಘಾಶಿನಿ, ಶಿಬಿರದ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ಹಿತೇಶ್ ಸ್ವಾಗತಿಸಿ, ಮಮತಾ ವಂದಿಸಿದರು, ಶಿಬಿರಾರ್ಥಿ ಯಶಸ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *