ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪವಾಸಕ್ಕೆ ಆರು ದಿನಗಳಾಗಿವೆ. ಒಂದು ತೊಟ್ಟು ನೀರು ಬಿಟ್ಟರೆ ಮೋದಿ ಬೇರೇನನ್ನೂ ಸ್ವೀಕರಿಸಿಲ್ಲ. ನರೇಂದ್ರಮೋದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶ್ವೇತಭವನದಲ್ಲಿ ನಿನ್ನೆ ರಾತ್ರಿ ಭರ್ಜರಿ ಭರ್ಜರಿ ಊಟದ ವ್ಯವಸ್ಥೆ ಏರ್ಪಡಿಸಿದ್ದರು. ಮುಂದೆ ಪ್ಲೇಟ್ ತಂದಿಡುತ್ತಲೇ ಕೇವಲ ಬಿಸಿನೀರನ್ನ ಕುಡಿದು ಮೋದಿ ಸುಮ್ಮನಾದರು. ನವರಾತ್ರಿ ಹಿನ್ನೆಲೆಯಲ್ಲಿ ಉಪವಾಸದಲ್ಲಿರುವ ಮೋದಿ ನೀರನ್ನ ಬಿಟ್ಟು ಬೇರೆ ಏನನ್ನೂ ಸೇವಿಸಲಿಲ್ಲ.
ಇದರಿಂದ ವಿಚಲಿತರಾದ ಒಬಾಮಾ ಮತ್ತು ಇತರೆ ಸಹಚರರು ತಾವೂ ಸಹ ಸುಮ್ಮನೆ ಕುಳಿತಿದ್ದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಮೋದಿ, ದಯವಿಟ್ಟು ಊಟ ಮಾಡಿ ನಾನು ಉಪವಾಸದಲ್ಲಿದ್ದೇನೆ. ನೀವು ನನಗಾಗಿ ನಿಮ್ಮ ಊಟ ಬಿಡುವುದು ಬೇಡ ಎಂದು ಮನವೊಲಿಸಿದರು ಎಂದು ವಿದೇಶಾಂಗ ಕಾರ್ಯದಶರ್ಿಗಳು ಹೇಳಿದ್ದಾರೆ. ಇವತ್ತು ನರೇಂದ್ರಮೋದಿ ಉಪವಾಸದ 6ನೇ ದಿನವಾಗಿದ್ದರೂ ಅವರಲ್ಲಿ ಚೈತನ್ಯ ಮಾತ್ರ ಕುಂದಿಲ್ಲ. ಅಕ್ಷಾಂತರ ಅನಿವಾಸಿ ಭಾರತೀಯರನ್ನ ಉದ್ದೇಶಿಸಿ ನಿನ್ನೆ ಮೋದಿ ಮಾಡಿದ ಭಾಷಣ ಅವರ ಚೈತನ್ಯವನ್ನ ಎತ್ತಿ ಹಿಡಿದಿತ್ತು.
