ಕೈಕಂಬ:ಕೆಲ ವರ್ಷಗಳ ಹಿ೦ದೆ ಪ್ರಸಾರವಾಗುತ್ತಿದ್ದ ಸುಪ್ರಸಿದ್ಧ ‘ಶಕಲಕ ಬೂಂ ಬೂಂ’ ಎ೦ಬ ಶೋ ಎಲ್ಲರಿಗೂ ನೆನಪಿರಲೇಬೇಕು ಅಲ್ವಾ..ಇದೇ ಹೆಸರಿನ ಚಿತ್ರವೊಂದು ತುಳುನಾಡಿನಲ್ಲಿ ಸದ್ದಿಲ್ಲದೆ  ಸೆಟ್ಟೇರಲು ಸಿದ್ದವಾಗಿದೆ.
IMG-20191105-WA0012
ಶ್ರೀಶಾ ನಾಯಕ್ ಎಳ್ಳಾರೆ  ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶಕಲಕ ಬೂಂ ಬೂಂ ಎನ್ನುವ ಕಾಮಿಡಿ ಹಾರರ್ ಸಿನಿಮಾದ ಮಹೂರ್ತಕ್ಕಾಗಿ ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. 20 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಇದ್ದು, ಡಿಸೆಂಬರ್ ಒಂದರಿಂದ ಶೂಟಿಂಗ್ ಆರಂಭಗೊಳ್ಳಲಿದೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ತುಳುವಿನ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಲಿದೆ. ಸಿನೆಮಾದ ಶೂಟಿಂಗ್ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಭಾಗಗಳಲ್ಲಿ ನಡೆಯಲಿದೆ.
IMG-20191105-WA0022
ನಿತ್ಯಾನಂದ ನಾಯಕ್ ನರಸಿಂಗೆ    ಮತ್ತು ಉಮೇಶ್ ಪ್ರಭು ಚಿತ್ರ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಈ ಸಿನೆಮಾಕ್ಕೆ ಚಿತ್ರಕಥೆ ಎಸ್.ಪಿ.ಎಲ್ ಬರೆದಿದ್ದು, ಅರ್ಜುನ್ ಲೂಯಿಸ್ ಅವರ ಸಂಭಾಷಣೆ ಇದೆ.  ಸಾಹಿತ್ಯ ಹೆಣೆದವರು ಯೋಗೀಶ್ ಅಡಕಲಕಟ್ಟೆ,   ತುಳುನಾಡ ಕಲಶ ಶ್ರೀ ಜಿ.ಸ್ ಗುರುಪುರ, ಕಾರ್ತಿಕ್ ಮುಲ್ಕಿ , ಸಂತೋಷ್  ಸೋನು,    ಛಾಯಾಗ್ರಹಣ ಹಾಗೂ ಸಂಕಲನ ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಪುತ್ತೂರು .ಚಿತ್ರದಲ್ಲಿ ಎಸ್.ಪಿ.ಎಲ್, ಗೋಡ್ವಿನ್ ಸ್ಪಾರ್ಕ್ಲ್, ಲಕ್ಷಾ ಶೆಟ್ಟಿ ,ಅರವಿಂದ ಬೋಳಾರ್, ಉಮೇಶ್ ಮಿಜಾರ್, ರವಿ ರಾಮಕುಂಜ, ರೂಪಾಶ್ರೀ ವರ್ಕಾಡಿ, ವಸಂತ್ ಮುನಿಯಾಲ್ ಮುಂತಾದ ಕಲಾವಿದರಿದ್ದಾರೆ.
IMG-20191105-WA0014IMG-20191105-WA0013

By suddi9

Leave a Reply

Your email address will not be published. Required fields are marked *