ವಾಮಂಜೂರು : ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲು ವಾರ್ಡ್ ಸಂಖ್ಯೆ ೨೦ರ ಬಿಜೆಪಿ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಪರವಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವಾರ್ಡ್ ವ್ಯಾಪ್ತಿಯಲ್ಲಿ ಬಿರುಸಿನ ಮತ ಯಾಚನೆ ಕಾರ್ಯ ಮುಂದುವರಿಸಿದ್ದಾರೆ.gur-nov-4-hemalatha-2

ವಾರ್ಡ್ ವ್ಯಾಪ್ತಿಯ ಮಂಜಲ್ದೋಟ, ಆಶ್ರಯ ಕಾಲೊನಿ, ಜ್ಯೋತಿನಗರ, ಅಮೃತನಗರ, ವಾಮಂಜೂರು, ಜಂಕ್ಷನ್, ಅಂಬೇಡ್ಕರ್ ನಗರ ತೊಯ್ಪೆಕಲ್ ಮುಂತಾದ ಕಡೆಗಳಲ್ಲಿ ಹೇಮಲತಾ ಸಾಲ್ಯಾನ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದವರು ಮನೆ-ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು.gur-nov-4-hemalatha-6

gur-nov-4-hemalatha-3ಹೇಮಲತಾರೊಂದಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಜಗದೀಶ ಶೇಣವ, ಉದ್ಯಮಿ ರಘು ಸಾಲ್ಯಾನ್, ಅನಿಲ್ ರೈ, ಗುರುಪುರ ಬಿಜೆಪಿ ಅಧ್ಯಕ್ಷ ರಾಜೇಶ್ ಸುವರ್ಣ, ರಾಜೇಶ್ ಕೊಟ್ಟಾರಿ, ಸುಧೀರ್ ನೊರೊನ್ಹಾ, ರ‍್ವಿನ್, ಕಿಶೋರ್  ದಾಸ್, ಶರೀಫ್, ರಶೀದ್, ಶಾಬಿರ್, ಮೊಹಮ್ಮದ್ ಇಕ್ಬಾಲ್, ಅಹ್ಮದ್ ಬಾವ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *