ಕಿನ್ನಿಗೋಳಿ: ಹಿರಿಯರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ನಡೆದು ನಮ್ಮ ಪರಂಪರೆಯನ್ನು ಉಳಿಸಿ ಬೇಳೆಸಿದ ಕೀತರ್ಿ ಕೊಡೆತ್ತೂರು ಜನತೆಗೆ ಸಲ್ಲುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು . ಅವರು ಸೆ. 28 ರಂದು ಕೊಡೆತ್ತೂರು- ಕಟೀಲು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 50 ನೇ ಆಚರಣೆ ಸಂದರ್ಭ ಕೊಡೆತ್ತೂರು ಮೂಡುಮನೆಯ ಮುಂಭಾಗದ ಲಲಿತಾ ನಂದಿನಿ ವೇದಿಕೆಯಲ್ಲಿ ನಡೆದ ಧಾಮರ್ಿ ಸಭೆಯಲ್ಲಿಧ್ಯಕ್ಷತೆ ವಹಿಸಿ ಮಾತನಾಡಿದರು.
DSC00919

DSC00918
ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು ಕಟೀಲು ದೇವಳದ ಅರ್ಚಕರಾದ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ , ವೆ. ಮೂ. ಹರಿನಾರಾಯಣದಾಸ ಆಸ್ರಣ್ಣ , ವೆ. ಮೂ. ವಾಸುದೇವ ಆಚಾರ್ಯ ಶಿಬರೂರು ಶುಭಾಶಂಸನೆ ಗೈದರು. ?ಇದೇ ಸಂದರ್ಭದಲ್ಲಿ ಬಿ. ವಿಶ್ವನಾಥ ಶೆಟ್ಟಿ ಕೊಡೆತ್ತೂರು, ಚಂದ್ರಕಾಂತ್ ನಾಯಕ್ ಕಟೀಲು, ಪ್ರಭಾಕರ ಶೆಟ್ಟಿ , ವಾಸುದೇವ ಆಚಾರ್ಯ, ಕಂಬಳಿ ಇವರನ್ನು 50 ವರ್ಷದ ನೆನಪಿಗಾಗಿ ಸಮ್ಮಾನಿಸಲಾಯಿತು ಹಾಗೂ 50 ವರ್ಷದ ನೆನಪಿಗಾಗಿ ಸುವರ್ಣ ಸ್ಪರ್ಶ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು. ಮತ್ತು ಕಣ್ಣಿನ ತಪಾಸಣೆ ನಡೆಸಿದ್ದು ಅವರಿಗೆ ಉಚಿತ ಕಣ್ಣಡಕ್ಕ ವಿತರಣೆ , ಮತ್ತು ಸ್ಥಳೀಯ ಪ್ರತೀಭಾವಂತ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ನೀಡ ಲಾಯಿತು ಈ ಸಂದರ್ಭ ಮಾಜಿ ಸಚಿವ ನಾಗರಾಜ ಶೆಟ್ಟಿ , ಹಿಂದು ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್, ಯುಗಪುರುಷದ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಐಕಳ ಗಣೇಶ್ ವಿ. ಶೆಟ್ಟಿ , ಯಾದವ ಕೋಟ್ಯಾನ್ ಪೆಮರ್ುದೆ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ರಘುರಾಮ ಪದವಿನಂಗಡಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ನಿರಂಜನ ಶೆಟ್ಟಿ ಕೊಡೆತ್ತೂರು ಮಾಗಂದಡಿ, ಮುಂಬಯಿ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಸಾಂತ್ಯ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಈಶ್ವರ ಕಟೀಲ್ ಸ್ವಾಗತಿಸಿದರು. ಕಾರ್ಯಧ್ಯಕ್ಷ ಲೋಕೇಶ್ ಶೆಟ್ಟಿ ಕೊಡೆತ್ತೂರು ಬಾಳಿಕೆ ಮನೆ ವಂದಿಸಿದರು. ಪ್ರಧಾನ ಕಾರ್ಯದಶರ್ಿ ಕೊಡೆತ್ತೂರು ಗುತ್ತು ಹೊಸಮನೆ ದೇವಿಪ್ರಸಾದ್ ಎಸ್. ಶೆಟ್ಟಿ ಪ್ರಸ್ತಾವನೆಗೈದರು. ಸೋಂದಾ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *