ಬಂಟ್ವಾಳ : ದೇಶಕ್ಕೆ ಚೈತನ್ಯ ಮೂಡಲು ಸಂಸ್ಕಾರದ ಅಗತ್ಯವಿದೆ. ಸಂಸ್ಕಾರವನ್ನು ಕೊಡುವುದು ಶಿಕ್ಷಣ ಸಂಸ್ಥೆಗಳ ಮೂಲಕ ಮಾತ್ರ ಸಾಧ್ಯ ಎನ್ನುವ ಹಿನ್ನೆಲೆಯಲ್ಲಿ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ. ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ’ಉತ್ಥಾನ’ ರಾಷ್ಟ್

ಬದಲಾವಣೆಯನ್ನು ಯಾವ ಹಂತದಲ್ಲಿ ರೂಢಿಸಿಕೊಳ್ಳಬೇಕು, ನಡವಳಿಕೆ ಹೇಗೆ ಮೈಗೂಡಿಕೊಳ್ಳಬೇಕು. ಸಮಯದ ಸದುಪಯೋಗ, ಸಮಾಜದ ಮಧ್ಯೆ ಹೇಗಿರಬೇಕು ಎಂದು ತಿಳಿಸಿಕೊಡುವುದರಿಂದ ಈ ಶಿಬಿರವನ್ನು ಸಂಪೂರ್ಣವಾಗಿ ಸದುಸದುಪಯೋಗಪಡಿಸಿ ಕೊಳ್ಳು ವಂತೆ ಕಿವಿ ಮಾತು ಹೇಳಿದರು.
ಅತಿಥಿಯಾಗಿದ್ದ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಮಾತನಾಡಿ ವಿದ್ಯೆ ಜ್ಞಾನಕ್ಕೆ ಸೀಮಿತವಾದದ್ದು, ಸಂಸ್ಕಾರ ವೃದ್ಧಿಗೊಳ್ಳಲು ಇಂತಹ ಶಿಬಿರಗಳ ಅವಶ್ಯಕತೆಯಿದೆ. ಭಾವನೆಗಳ ಸಧೃಡತೆಯು ಈ ಶಿಬಿರದ ಮೂಲಕ ಸಾಧ್ಯ. ಹೆಣ್ಣು ಮಕ್ಕಳು ತಮ್ಮ ಬದುಕನ್ನು ಸಂಪೂರ್ಣಗೊಳಿಸಲು ಬೇಕಾದಂತಹ ಶಿಕ್ಷಣವನ್ನು ಈ ಶಿಬಿರದ ಮೂಲಕ ಪಡೆದುಕೊಳ್ಳಿ ಎಂದರು.
ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶಿಬಿರಾಧಿಕಾರಿಯಾದ ವಿವೇಕಾನಂದ ಪದವಿ ಪೂರ್ವ ವಿಭಾಗದ ಗಣಿತಶಾಸ್ತ್ರ ಉಪನ್ಯಾಸಕಿಯಾದ ನಿರ್ಮಲಾ, ಕಮಲಾ ಪ್ರಭಾಕರ್ ಭಟ್, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಶ್ರೀರಾಮ ಪದವಿ ವಿದ್ಯಾಲಯದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕೆ ಎನ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಶಿಬಿರದ ಕಾರ್ಯವಾಹಕಿ ಶೋಭಾ ವಿ ಶೆಟ್ಟಿ ಸ್ವಾಗತಿಸಿ, ಶೈಲಿನಿ ಬಿ ವಂದಿಸಿ, ಶೋಭಾ ಕಾರ್ಯಕ್ರಮ ನಿರೂಪಿಸಿದರು.
