ಬಂಟ್ವಾಳ: ರಾಜ್ಯ ಪ್ರವಾಸೋದ್ಯಮ ಸಚಿವರಾದ ಸಿ.ಟಿ ರವಿಯವರು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಿ.ಸಿ ರೋಡಿನ ಕಾರ್ಯಾಲಯಕ್ಕೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದ್ಲಿರುವ ಧಾರ್ಮಿಕ ಕೇಂದ್ರಗಳಾದ ಕಾರಿಂಜ ,ನರಹರಿ,ಪೊಳಲಿ ಹಾಗೂ ನಂದಾವರ ಕ್ಷೇತ್ರಗಳ ಸಹಿತ ವಿವಿಧ ಅಭಿವೃದ್ದಿಗೆ ವಿಶೇಷ ಅನುದಾನ ಮಂಜೂರುಗೊಳಿಸುವಂತೆ ಶಾಸಕ ಯು.ರಾಜೇಶ್ ನಾಯ್ಕ್ ಅವರು ಮನವಿ ಮಾಡಿದರು.
ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ ಸಚಿವರು, ಬಂಟ್ವಾಳಕ್ಕೆ ವಿಶೇಷ ಯೋಜನೆಯೊಂದನ್ನು ಪ್ರಕಟಿಸುವ ಭರವಸೆ ನೀಡಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪುರಸಭಾ ಸದಸ್ಯ ಗೋವಿಂದ ಪ್ರಭು, ತಾಪಂ ಸದಸ್ಯ ಪ್ರಭಾಕರ ಪ್ರಭು, ತಾಪಂ ಮಾಜಿ ಅಧ್ಯಕ್ಷ ಯಶವಂತ ದೆರಾಜೆ, ಪ್ರಮುಖರಾದ ರಮನಾಥ ರಾಯಿ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ರೋನಾಲ್ಡ್ ಸೋಜ ಅಮ್ಟಾಡಿ, ಪ್ರದೀಪ್ ಕುಮಾರ್ ಅಜ್ಜಿಬೆಟ್ಟು, ಸುರೇಶ್ ಕೋಟ್ಯಾನ್, ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು.

