ಬಂಟ್ವಾಳ :  ಆಹಾರದ ಬೇಟೆಗೆಂದು ಕಾಡಿನಿಂದ            ನಾಡಿಗೆ ಬಂದ ಚಿರತೆಯೊಂದು    ತಾಲೂಕಿನ ರಾಯಿ ಗ್ರಾಮದ  ಬಲ್ಲಾಳ್‌ಬೆಟ್ಟು ವಿನಲ್ಲಿ  ಬಾವಿಗೆ ಬಿದ್ದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಇಲ್ಲಿನ ಮೋನಪ್ಪ ಬಂಗೇರ ಅವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು, ಬಂಟ್ವಾಳ ಅರಣ್ಯ ಇಲಾಖೆ ಮತ್ತು ಬಂಟ್ವಾಳ  ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಮೇಲಕ್ಕೆತ್ತಿ, ಸುರಕ್ಷಿತವಾಗಿ   ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
IMG-20190930-WA0105
ಸಾಕು ನಾಯಿಯನ್ನು ಹಿಡಿಯಲೆಂದು ಮುಂಜಾವಿನಲ್ಲಿ ಮನೆ ಅಂಗಳಕ್ಕೆ ಬಂದಿದ್ದ ಚಿರತೆ ದಂಡೆ ಇಲ್ಲದ ಬಾವಿಗೆ ಬಿದ್ದಿದ್ದು, ನಾಯಿಗಳ ಕೂಗಾಟ ಕೇಳಿ ಮನೆ ಮಂದಿ ಹೊರ ಬಂದಾಗ ಬಾವಿಯಲ್ಲಿ ಚಿರತೆ ಕಂಡಿತ್ತು. ಬಾವಿ ಸುಮಾರು ೧೦ ಅಡಿ ಆಳವಿದ್ದು, ಚಿರತೆ ಮೇಲೆ ಬರಲಾಗದೆ ಘರ್ಜಿಸುತ್ತಿತ್ತು. ಮಾಹಿತಿ ತಿಳಿದ ಬಂಟ್ವಾಳ ಅರಣ್ಯ ಇಲಾಖೆ ಮತ್ತು ಬಂಟ್ವಾಳ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿ ಬಾವಿಗೆ ಏಣಿ ಇರಿಸಿ, ಮೇಲ್ಭಾಗಕ್ಕೆ ಬಲೆ ಹಾಕಿ ಚಿರತೆಯನ್ನು ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾದರು.  ಪಶು ವೈದ್ಯಾಽಕಾರಿ ಅವರು ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ರಕ್ಷಿತಾರಣ್ಯಕ್ಕೆ ಸಾಗಿಸಲಾಯಿತು.
IMG-20190930-WA0107
ಬಂಟ್ವಾಳ ಅರಣ್ಯ ಇಲಾಖೆಯ ವಲಯ ಅರಣ್ಯಾಽಕಾರಿ ಬಿ.ಸುರೇಶ್, ಉಪ ಅರಣ್ಯಾಽಕಾರಿ ಪ್ರೀತಂ,  ಅರಣ್ಯ ರಕ್ಷಕರಾದ ಗೀತೇಶ್, ರವಿ ಕುಮಾರ್ ರೇಖಾ, ಲಕ್ಷ್ಮಿ ನಾರಾಯಣ, ಭಾಸ್ಕರ, ಚಾಲಕ ಜಯರಾಂ ಮತ್ತು ಅಗ್ನಿ ಶಾಮಕ ದಳದ ಸಹಾಯಕ ಠಾಣಾಽಕಾರಿ ರಾಜೀವ, ಚಾಲಕ ಕಿರಣ್ ಕುಮಾರ್, ಅಗ್ನಿ ಶಾಮಕರಾದ ಆಶಾ, ರೋಹಿತ್, ಹೋಂ ಗಾರ್ಡ್ ರಮೇಶ್ ಕುಮಾರ್   ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.    ಬಾವಿಗೆ ಬಿದ್ದ ಚಿರತೆ ವೀಕ್ಷಣೆಗೆ ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು.

By suddi9

Leave a Reply

Your email address will not be published. Required fields are marked *