ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ದೇವರ ದರ್ಶಣ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ಪದ್ಮನಾಭ ಭಟ್ ಪ್ರಸಾದ ನೀಡಿದರು.30-003

ದೇವಳಕ್ಕೆ ಆಗಮಿಸಿದ ಸಚಿವರು ಎಷ್ಟೋ ಕಾಲದಿಂದ ಪೊಳಲಿ ದೇವಿಯ ದರ್ಶನ ಪಡೆಯಬೇಕೆಂಬ ಕಾತುರದಲ್ಲಿದ್ದೆ ಈಗ ಕಾಲಕೂಡಿ ಬಂದಿದೆ ದೇವಿಯ ದರ್ಶನ ಪಡೆದು ಪುನೀತನಾದೆ ದೇವಿ ನಮಗೆಲ್ಲರಿಗೂ ಆರೋಗ್ಯ ನೀಡಿ ಸಧಾ ಕಾಪಾಡುತ್ತಾಳೆ ಎನ್ನುವ ನಂಬಿಕೆ ಇದೆ. ಇಲ್ಲಿಯದೇವಾಲಯವು ಕಂಡು ತುಂಬಾ ಸಂತೋಷ ವಾಯಿತು ಎಂದರು.30-02

ದೇವಸ್ಥಾನದ ಮೊಕ್ತೇಸರ ಯು.ತಾರಾನಾಥ ಆಳ್ವ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅವರನ್ನು ಬರಮಾಡಿಕೊಂಡರು. ಸಚಿವರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಇದ್ದರು. ದೇವಳದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.30-2000

30-00005

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ ಸದಸ್ಯ ಯಶವಂತ ಪೂಜಾರಿ, ವೆಂಕಟೇಶ್ ನಾವಡ, ಪುರುಷೋತ್ತಮ, ಚಂದ್ರಾಹಾಶ ಶೆಟ್ಟಿ , ಸುಕೇಶ್ ಚೌಟ, ಗ್ರಾ.ಪಂ. ಸದಸ್ಯರಾದ ಲೋಕೇಶ್ ಭರಣಿ,ಮಾಧವ ಕಾಜಿಲ ಸೋಹನ್ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು,

30-0000101

30-0099

30-0004

By suddi9

Leave a Reply

Your email address will not be published. Required fields are marked *