ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಪುರೋಹಿತ ಲೋಕೇಶ್ ಶಾಂತಿ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ಸುಸಂದರ್ಭದಲ್ಲಿ ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.21ರಂದು ಶನಿವಾರ ಬೆಳಗ್ಗೆ 8.ಗಂಟೆಯಿಂದ ಮರುದಿನ ಸೆ.22ರ ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.
ಏಕಾಹ ಭಜನಾ ಉದ್ಘಾಟನೆಯನ್ನು ಬಂಟ್ವಾಳ ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ.ಪೂಜಾರಿ ವಹಿಸಲಿದ್ದಾರೆ. ಶನಿವಾರ ಬೆಳಗ್ಗೆ 7.ರಿಂದ 8ಗಂಟೆಯವರೆಗೆ ಗಣಹೋಮ. ಬೆಳಗ್ಗೆ 8.ಗಂಟೆಗೆ ಏಕಾಹ ಭಜನಾ ಉದ್ಘಾಟನೆ. ಭಾನುವಾರ 8.ಗಂಟೆಗೆ ಭಜನಾ ಮಂಗಳೋತ್ಸವ. 9 ರಿಂದ 10ಗಂಟೆಯವರೆಗೆ ಕಲಶಾಭಿಷೇಕ. 12 ಗಂಟೇಗೆ ಮಹಾಪೂಜೆ ,ಪ್ರಸಾದ ವಿತರಣೆ. 1 ಗಂಟೆಗೆ ಅನ್ನ ಸಂತರ್ಪಣೆಯು ನಡೆಯಲಿದೆ. ಎಂದು ಪಂಚ ಗ್ರಾಮದ ಪ್ರಕಟನೆ ತಿಳಿಸಿದೆ.
