ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಸಲುವಾಗಿ ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.21ರಂದು ಶನಿವಾರ ಬೆಳಗ್ಗೆ ಏಕಾಹ ಭಜನೆಗೆ ಪುರೋಹಿತ ಲೋಕೇಶ್ ಶಾಂತಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಿಲ್ಲವ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ. ಪೂಜಾರಿ ಹಾಗೂ ಪಂಚಗ್ರಾಮದ ಪಧಾದಿಕಾರಿಗಳು ಉಪಸ್ಥಿತರಿದ್ದರು.

