ಕೈಕಂಬ: ಮಂಗಳೂರು ತಾಲೂಕಿನ ಕಂದವಾರ ಗ್ರಾಮದ ರಾಯರಕೋಡಿ ದಿ. ಗೋಪಾಲ್ ಶೆಟ್ಟಿ ಅವರ ಪುತ್ರ ಸುರೇಶ್ ಶೆಟ್ಟಿ  (49 )ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹ ದಲ್ಲಿ ಗುರುವಾರ ನಿಧನ ಹೊಂದಿದರು. ಸುರೇಶ್ ಶೆಟ್ಟಿ ಅವರು ಸುಮಾರು 20 ವರ್ಷಗಳಿಂದ ಹೊಸದಿಗಂತ ಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.942f349a-ab94-445f-9902-f0a35262ab7e

ಅಲ್ಲದೆ ಕಂದಾವರ ಗ್ರಾಮಪಂಚಾಯಾತ್‍ನ ಮಾಜಿ ಸದಸ್ಯರಾಗಿಯು ನಿಸ್ವಾರ್ಥ ಸೇವೆಯಲ್ಲಿ ತನ್ನನು ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇವರ ಅಂತ್ಯ ಕ್ರೀಯೆಯಲ್ಲಿ ಉತ್ತರ ವಿಧಾನ ಸಭಾ ಶಾಸಕ ವೈ ಭರತ್ ಶೆಟ್ಟಿ, ಕಂದಾವರ ಗ್ರಾ.ಪಂ.ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ, ಗ್ರಾ.ಪಂ ಸದಸ್ಯರು, ತಾ. ಪಂ ಸದಸ್ಯರು. ಹಿಂದೂ ಮುಖಂಡರು ಪಾಲ್ಗೊಂಡಿದ್ದರು. ಅವರು ತಾಯಿ , ಪತ್ನಿ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *