ಕೈಕಂಬ:ಕುಪ್ಪೆಪದವು ಗುರುಪುರ ಕೈಕಂಬದ ಡಾ.ಸಪ್ವಾನ್ ಅಹ್ಮದ್ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಿಂದ ಡಿ.ಎಂ ನ್ಯೂರೋಜಿಯಲ್ಲಿ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಗುರುಪುರ ಕೈಕಂಬ ಅದರ್ಶನಗರದ ಅಹ್ಮದ್ ಹುಸೇನ್ ಮತ್ತು ತಸ್ಲೀಮ್ ದಂಪತಿಗಳ ಪುತ್ರನಾಗಿರುವ ಡಾ. ಸಪ್ವಾನ್ ಅಹ್ಮದ್ ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಬೆಂಗಳೂರಿನ ನಿಮ್ಹಾನ್ಸ್‍ನ 24 ಘಟಿಕೋತ್ಸವದಲ್ಲಿ ಕೇಂದ್ರ ಅರೋಗ್ಯ ಸಚಿವ ಡಾ.ಹರ್ಷವರ್ಧನರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿ.ಎಂ.ನ್ಯೊರೋಲಜಿ ಪದವಿ ಮತ್ತು ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ ಸ್ವೀಕರಿಸಿದರು.
