ಕೈಕಂಬ: ಬಿರುವೆರ್ ಕುಡ್ಲ ಬಜಪೆ ಘಟಕದ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೆ. 1ರಂದು ಭಾನುವಾರ ಬಜಪೆ ಬ್ರಹ್ಮಶ್ರೀ ಗುರುನಾರಾಯಣ ಮಂದಿರದ ಅಬ್ಬಯ್ಯ ವೆಂಕಪ್ಪ ವೇದಿಕೆಯಲ್ಲಿ ನಡೆಯಿತು.ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ಅಧ್ಯಕ್ಷತೆ ವಹಿಸಿದ್ದರು.ನೂತನ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್ ಕಾನ ಅವರನ್ನು ಆಯ್ಕೆ ಮಾಡಲಾಯಿತು.
ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವ ಸಲಹೆಗಾರ ಲೋಕೆಶ್ ಪೂಜಾರಿ ಬಜಪೆ ಇವರು ಬಿರುವೆರ್ ಕುಡ್ಲ ಸಂಘಟನೆಯನ್ನು ಉದ್ದೇಶಿಸಿ ಮಾತನಾಡಿ ಬಿರುವೆರ್ ಕುಡ್ಲ ಸಂಘಟನೆಯು ಹಲಾವಾರು ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಸಮಾಜಮುಖಿ ಕಾರ್ಯಗಳನ್ನು ಮಾಡಿ ಹನಿ ಹನಿ ಸೇರಿ ಈಗ ಮಹಾ ಸಾಗರವಾಗಿ ಬೆಳೆದು ನಿಂತಿದೆ ಈ ಸಂಘಟನೆಯು ಇನ್ನೂ ಎತ್ತರತ್ತೆರಕ್ಕೆ ಬೆಳೆಯಲಿ ಎಂದು ನೂತನ ಪಧಾದಿಕಾರಿಗಳಿಗೆ ಶುಭ ಹಾರೈಸಿದರು.
ಘಟಕದ ಉಪಾಧ್ಯಕ್ಷ ಚಂದ್ರಶೇಖರ್ ಅಮೀನ್ ಇವರು ಬಿರುವೆರ್ ಕುಡ್ಲ ಬಜಪೆ ಘಟಕದ 27 ತಿಂಗಳ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ 31 ಮತ್ತು 32ನೇ ಸ್ಪಂದನ ಸೇವಾ ಯೋಜನೆಯಡಿ ಎರಡು ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಲಾಯಿತು.31ನೇ ಸೇವಾ ಯೋಜನೆ ಪೊರ್ಕೋಡಿ ನಿವಾಸಿ ರಾಕೇಶ್ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ ವೈದ್ಯಕೀಯ ನೆರವಿಗೆ ಸಹಾಯಹಸ್ತವನ್ನುಉದಯ ಪೂಜಾರಿ ಬಳ್ಳಾಲ್ ಬಾಗ್ ಹಸ್ತಾಂತರ ಮಾಡಿದರು 32ನೇ ಸೇವಾ ಯೋಜನೆ ಬಜಪೆ ನಿವಾಸಿ ಸುಂದರ ರವರ ಮಗಳು ಗೆಡ್ಡೆ ಶಸ್ತ್ರಚಿಕಿತ್ಸೆ ಗೆ ವೈದ್ಯಕೀಯ ನೆರವು ನೀಡಲಾಯಿತು. ಬನ್ನಂಜೆ ಬಾಬು ಅಮೀನ್ ಸಹಾಯ ಧನವನ್ನು ಹಸ್ತಾಂತರ ಮಾಡಿದರು. ಅಲ್ಲದೆ 6 ಮಂದಿಗೆ ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.
ಪದಗ್ರಹಣ ಕಾರ್ಯಕ್ರಮದಲ್ಲಿ ಬಿರುವೆರ್ ಕುಡ್ಲ ದ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಖ್ಯಾತ ಜಾನಪದ ವಿದ್ವಾಂಸರು ಬನ್ನಂಜೆ ಬಾಬು ಅಮೀನ್, ಲೋಕೆಶ್ ಪೂಜಾರಿ ಬಜಪೆ, ಜಾನಪದ ಲೇಖಕರು ಜೆ. ತಿಮ್ಮಪ್ಪ ಪೂಜಾರಿ ಜಪ್ಪಿನಮೊಗರು, ಬೆನೆಟ್ ಜಿ ಅಮ್ಮನ್ನ ಸದಸ್ಯರು ತುಳು ಸಾಹಿತ್ಯ ಅಕಾಡೆಮಿ, ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾಧ್ಯಕ್ಷ ಶರತ್ ಪೂಜಾರಿ ಬಜಪೆ, ನೂತನ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಾನ, ಉಪಾಧ್ಯಕ್ಷ ಚಂದ್ರಶೇಖರ್ ಅಮೀನ್, ಬಜ್ಪೆ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಶಿವರಾಮ ಪೂಜಾರಿ , ಕೃಷ್ಣಪ್ಪ ಪೂಜಾರಿ ಕಾನ, ಬಿರುವೆರ್ ಕುಡ್ಲ ಬಜಪೆ ಘಟಕದ ಕಂದಾವರ ವಲಯದ ಸಹಸಂಚಾಲಕ ಸಂತೋಷ್ ಪೂಜಾರಿ .ಘಟಕದ ಜೊತೆ ಕಾರ್ಯದರ್ಶಿ ಪ್ರಸಾದ್ ಬೈಧ್ಯ ಮುಂತಾದವರು ಉಪಸ್ಥಿತರಿದ್ದರು.
ಖ್ಯಾತ ಜಾನಪದ ಲೇಖಕರು ಜೆ.ತಿಮ್ಮಪ್ಪ ಪೂಜಾರಿಯವರು ಬರೆದ ತುಳು ಲೇಖನ ತುಳುವೆರೆ ರೀತಿ ರಿವಾಜಿಲು ಬೊಕ್ಕ ಪದ್ನಾಜಿ ಸಂಸ್ಕಾರೋಲು ಎಂಬ ಪುಸ್ತಕವನ್ನು ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ವೇದಿಕೆಯಲ್ಲಿ ಬಿಡುಗಡೆ ಗೊಳಿಸಿ ಲೋಕಾರ್ಪಣೆ ಮಾಡಿದರು.
ಕಾರ್ಗೀಲ್ ಯುದ್ಧದಲ್ಲಿ ದೇಶಗೊಸ್ಕರ ಸೇವೆಯನ್ನು ಸಲ್ಲಿಸಿದ ನಿವೃತ್ತ ವೀರಯೋಧ ಶ್ರೀ ಚೆನ್ನಬಸಪ್ಪ ಸೆಕ್ಯುರಿಟಿ ಹೆಡ್ಡ್ JBF petrochemicals, Mangalore ಇವರಿಗೆ ಗೌರವಾರ್ಪಣೆ ಘಟಕದ ವತಿಯಿಂದ ಮಾಡಲಾಯಿತು 2ವರ್ಷದ ಯಶಸ್ವಿ ಅಧ್ಯಕ್ಷರು ಶ್ರೀ ಶರತ್ ಪೂಜಾರಿ ಬಜಪೆ ಯವರಿಗೆ ಘಟಕದ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು. ದೇವಿ ಕಿರಣ್ ರವರ ಚಿತ್ರ ಕಲೆಯಲ್ಲಿ ಮೂಡಿಬಂದ ಬಿರುವೆರ್ ಕುಡ್ಲ ದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಭಾವಚಿತ್ರವನ್ನು ಕೇವಲ ಎರಡು ನಿಮಿಷದಲ್ಲಿ ಬಿಡಿಸಿ ಉದಯ್ ಪೂಜಾರಿ ಯವರಿಗೆ ಹಸ್ತಾಂತರ ಮಾಡಲಾಯಿತು ಇದೆ ಸಮಯದಲ್ಲಿ ನಿರ್ಮಾಪಕ ಲಕ್ಷ್ಮೀಶ್ ಸುವರ್ಣ ಇವರು ರಚಿಸಿದ ಬಿರುವೆರ್ ಕುಡ್ಲ ಹಾಡನ್ನು ಉದಯ್ ಪೂಜಾರಿ ಯವರು ಬಿಡುಗಡೆ ಮಾಡಿದರು.ಬಂದ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಸಸಿಯನ್ನು ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸುವರ್ಣ ಮೆಲೋಡಿಸ್ ಮಂಗಳೂರು ವಿಶ್ವಾಸ್ ಗುರುಪುರ ಮತ್ತು ದೇವಿ ಕಿರಣ್ ಗಣೇಶ್ ಪುರ ಇವರ ಗಾಯನದಲ್ಲಿ ಸಂಗೀತ ಕಾರ್ಯಕ್ರಮ ಮೂಡಿಬಂತು. ನೃತ್ಯ ಕಾರ್ಯಕ್ರಮ Mangalore Amazing Dance Group Bajpe ಹಾಗೂ ತೀರ್ಥ ಪೂಜಾರಿ ಪೊಳಲಿ, ರಿದಮಿಕ್ ಯೋಗ ಕಾರ್ಯಕ್ರಮ ಸುಚೇತ ಪೂಜಾರಿ ಅರ್ಲ ನಡೆಸಿಕೊಟ್ಟರು.
ಸಂತೋಷ್ ಪೂಜಾರಿ ಸ್ವಾಗತಿಸಿ ಪ್ರಸಾದ್ ಬೈಧ್ಯ ವಂದಿಸಿ ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

