ಬಂಟ್ವಾಳ : ಪರಿಸರಕ್ಕೆ ಹತ್ತಿರವಾಗಿ ಬದುಕಿದ ಕುಂಬಾರರ ಮಣ್ಣಿನ ಯುಗವನ್ನು ಇತರರು ಹೈಜಾಕ್ ಮಾಡದಂತೆ ಎಚ್ಚರವಹಿಸಬೇಕು. ಕುಂಬಾರಿಕೆ ವೃತ್ತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕುಲಾಲ ಸಂಘಟನೆಗಳು ಮಾಡಬೇಕು ಎಂದು ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಹೇಳಿದರು. ಬಂಟ್ವಾಳ ಕುಲಾಲ ಯುವವೇದಿಕೆ ಮತ್ತು ಕುಲಾಲ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಪೊಸಳ್ಳಿಗದ್ದೆಯಲ್ಲಿ ನಡೆದ ಕೆಸರ್ದ ಕಂಡೊಡ್ ಕುಸೇಲ್ದ ಗೊಬ್ಬು ಎಸಲ್-೩ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕೃಷಿಕ ಕೊರಗಪ್ಪ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಕುಲಾಲ ಯುವವೇದಿಕೆಯ ಅಧ್ಯಕ್ಷ. ಸುಕುಮಾರ್ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್, ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಚಂಚಲಾಕ್ಷಿ ಸುಕುಮಾರ್, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷೆ ಜಯಂತಿಗಂಗಾಧರ, ಉದ್ಯಮಿ ಕೃಷ್ಣಪ್ಪ ಬಿ., ಮಹಿಳಾ ಅಧ್ಯಕ್ಷೆ ಭಾರತಿ ಸೇಸಪ್ಪ ಮುಖ್ಯ ಅತಿಥಿಗಳಾಗಿ ದ್ದರು. ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲು, ಕಾರ್ಯದರ್ಶಿ ಹರಿಪ್ರಸಾದ್, ಸಂಚಾಲಕ ಸತೀಶ್ ಜಕ್ರಿಬೆಟ್ಟು, ಕೋಶಾಧಿಕಾರಿ ಮಾದವ ಕುಲಾಲ್, ಸುಲೋಚನಾ ವೇದಿಕೆಯಲ್ಲಿದ್ದರು. ಗೌರವಾಧ್ಯಕ್ಷ ನಾರಾಯಣ ಸಿ. ಪೆರ್ನೆ ಸ್ವಾಗತಿಸಿದರು. ಸಲಹೆಗಾರ ಟಿ. ಶೇಷಪ್ಪ ಮೂಲ್ಯ ಪ್ರಾಸ್ತಾವನೆಗೈದರು. ಎಚ್ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ವೇದಿಕೆ : ಸಭಾವೇದಿಕೆಯು ಕುಂಬಾರನ ಮನೆಯ ಮಾದರಿಯಲ್ಲಿ ಆಲಂಕರಿಸಿ, ಮನೆಯ ತುಂಬಾ ನೇತು ಹಾಕಿರುವ ತರಕಾರಿಗಳು, ಒಂದು ಕಡೆ ಕೃಷಿಗೆ ಉಪಯೋಗಿಸುವ ನೇಗಿಲು, ಒನಕೆ, ಪಡಿ, ಕಳಸ, ಸೇರು, ಪಾವು ಹೀಗೆ ಹಲವು ವಿಶೇಷಗಳು. ಮನೆಯ ಯಜಮಾನಿಯಿಂದ ತುಳಸಿ ಪೂಜೆ ಮಾಡಲಾಯಿತು. ನಂತರ ಮನೆಯ ಯಜಮಾನ ಗದ್ದೆಯಿಂದ ಬೆಳೆದ ಹೊಸ ತೆನೆಯನ್ನು ಕೊಯ್ದು ಅದನ್ನು ಸಾಂಪ್ರದಾಯಿಕವಾಗಿ ಮನೆಯೊಳಗೆ ತಂದು ಮನೆತುಂಬಿಸುವ ಸುಂದರ ದೃಶ್ಯ ಹೀಗೆ ಹಳ್ಳಿಯ ಬದುಕಿನ ಸ್ವಾರಸ್ಯವನ್ನು ಮತ್ತೆ ನೆನಪಿಸುವ ಕಾರ್ಯಕ್ರಮ ಎಲ್ಲವೂ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿತು. ಕೆಸರು ಗದ್ದೆಗೆ ಹಾಲೆರೆಯುವ ಮೂಲಕ ಕ್ರೀಡಾಕೂಟ ಚಾಲನೆ ನೀಡಲಾಯಿತು.ಕವಿರಾಜ್, ಕಿಶೋರ್ ಮೊಂಡಕಾಪು, ಸಂದೀಪ್ ಮಯ್ಯರಬೈಲು, ಕಿಶೋರ್ ಬಂಗೇರ ಏರ್ಯ ಅಮ್ಟಾಡಿ, ರಾಧಾಕೃಷ್ಣ ಮರ್ತಾಜೆ, ದಿನೇಶ್, ಡೊಂಬಯ್ಯ ಭಂಡಾರಿಬೆಟ್ಟು, ಉಮೇಶ್ ಮೂಲ್ಯ, ಹರೀಶ್ ಕುಲಾಲ್ ಕಲ್ಲಡ್ಕ, ಯಾದವ ಕುಲಾಲ್ ಅಗ್ರಬೈಲು, ಅಶೋಕ್ ವಗ್ಗ, ಅಶೋಕ್ ಭಂಡಾರಿಬೆಟ್ಟು, ಪುರುಷೋತ್ತಮ, ಕಿಶೋರ್ ಬಸ್ತಿ ಪಡ್ಪು , ಸೋಮಯ್ಯ ಕುಲಾಲ್, ಮಾದವ ಕುಲಾಲ್, ಪುನೀತ್ ಕುಲಾಲ್ ಮುಂತಾದವರು ಕಾರ್ಯಕ್ರಮ ಕ್ಕೆ ಸಹಕಾರ ನೀಡಿದರು.


