ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಏಲಿಯನ್ ಗಳು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಳಸುತ್ತಿವೆಯೇ? ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಮಂಗಳ ಗ್ರಹದ ಪ್ರದೇಶದಲ್ಲಿ ‘ಟ್ರಾಫಿಕ್ ಸಿಗ್ನಲ್’ಅನ್ನು ಹೋಲುವಂತಹ ಚಿತ್ರವೊಂದನ್ನು ತೆಗೆದಿದೆ.

Mars-traffic-signal

ಬ್ರಿಟಿಷ್ ಯುಎಫ್ಓ ಆಸಕ್ತ ಜೋಸೆಫ್ ವೈಟ್ ಎಂಬುವವರು ಈ ‘ಟ್ರಾಫಿಕ್ ಸಿಗ್ನಲ್’ಅನ್ನು ಗುರುತಿಸಿದ್ದಾರೆ. ಕ್ಯೂರಿಯಾಸಿಟಿ ತನ್ನ ಸುತ್ತಾಟದ ಸಂರ್ಧದಲ್ಲಿ ಈ ಫೋಟೊ ತೆಗೆದಿದೆ.

ನಾನು ಮೊದಲಿನಿಂದಲೂ ನಾಸಾದ ಚಿತ್ರಗಳನ್ನು ಗಮನಿಸುತ್ತಿದ್ದೇನೆ ಮತ್ತು ಮತ್ತು ಪ್ರತಿದಿನ ನಾಸಾದ ವೆಬ್ ಸೈಟ್ ನಿಂದ ಅವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ವೆಸ್ಟರ್ನ್ ಡೇಲಿ ಪ್ರೆಸ್ ಗೆ ವೈಟ್ ಹೇಳಿದ್ದಾರೆ.

ಈ ಚಿತ್ರವನ್ನು ನೋಡಿದಾಗ ನನಗೆ ಇದು ಸ್ವಲ್ಪ ವಿಚಿತ್ರವಾಗಿಯೂ ಆಸಕ್ತಿದಾಯವಾಗಿಯೂ ಕಂಡುಬಂತು ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ನಾವೆಲ್ಲ ನಾಸಾದ ಪ್ರತಿಕ್ರಿಯೆಗಾಗಿ ಕಾಯಬೇಕು, ಅಲ್ಲಿಯವರಗೆ ಇದು ಮತ್ತೊಂದು ಬಂಡೆ ಎಂದುಕೊಳ್ಳೋಣ ಎಂದು ವರದಿ ಹೇಳಿದೆ.

By suddi9

Leave a Reply

Your email address will not be published. Required fields are marked *