ಕೈಕಂಬ:ಕುಪ್ಪೆಪದವು ವಿಷಪೂರಿತ ಹಾವು ಕಚ್ಚಿ ಯುವಕನೋರ್ವ ಸಾವಿಗೀಡಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕುಳವೂರು ಗ್ರಾಮದಲ್ಲಿ ನಡೆದಿದೆ.ಕುಳವೂರು ಬೊಳಿಯ ಕುಂಬುಡ ಕಲ್ಲು ನಿವಾಸಿ ಸುಂಕುಪೂಜಾರಿಯವರ ಮಗ ಉಮೇಶ್(40) ಮೃತಪಟ್ಟವರು.

IMG-20190831-WA0017
ಉಮೇಶ್ ಕೃಷಿ ಕಾರ್ಮಿಕರಾಗಿದ್ದು ಶುಕ್ರವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಸ್ಥಳೀಯ ತೋಟವೊಂದರಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ವಿಷಪೂರಿತವಾದ ಕನ್ನಡಿ(ಕಂದಡಿ) ಹಾವು ಕಚ್ಚಿತು.ತಕ್ಷಣವೇ ಅವರಿಗೆ ಸ್ಥಳೀಯ ನಾಟಿ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಾಟಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಉಮೇಶ್ ಮೃತ ಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಂಜಿಮಠ ಆರೋಗ್ಯಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

By Suddi9

Leave a Reply

Your email address will not be published. Required fields are marked *