ನ್ಯೂಯಾರ್ಕ್ : 2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಸಮನ್ಸ್ ಜಾರಿ ಮಾಡಿದೆ. 13 ವರ್ಷಗಳ ಬಳಿಕ ಅಮೆರಿಕಾಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ಪಾತ್ರದ ಬಗ್ಗೆ ನ್ಯೂಯಾಕರ್್ ನ ಫೆಡರಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

BJP Vikas Rally in Delhi

ಅಮೆರಿಕನ್ ಜಸ್ಟೀಸ್ ಸೆಂಟರ್ ಎಂಬ ಮಾನವ ಹಕ್ಕುಗಳ ಹೋರಾಟ ಸಮಿತಿ ನೀಡಿದ ದೂರಿನ ಹಿನ್ನಲೆಯಲ್ಲಿ ಸಮನ್ಸ್ ಜಾರಿ ಮಾಡಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಾಮಂತ್ರಿಯಾಗಿದ್ದ ವೇಳೆ 2002ರಲ್ಲಿ ಗೋದ್ರಾದಲ್ಲಿ ನರಮೇಧ ನಡೆದಿತ್ತು. ಅವರ ವಿರುದ್ಧ ಎಟಿಸಿಎ ಹಾಗೂ ಟಿವಿಪಿಎ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. 21 ದಿಗಳ ಒಳಗೆ ಸಮನ್ಸ್ ಗೆ ಉತ್ತರ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಒಂದು ವೇಳೆ ನರೇಂದ್ರ ಮೋದಿ ಸಮನ್ಸ್ ಗೆ ಉತ್ತರ ನೀಡದಿದ್ದಲ್ಲಿ ನ್ಯಾಯಾಲಯ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬರಾಕ್ ಒಬಾಮ ಆಹ್ವಾನ ಮೇರೆಗೆ ಸೆ.25ರಿಂದ 5 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕ ಭೇಟಿ ನಡುವೆಯೇ ಪ್ರಧಾನಿ ಮೋದಿಯವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

By suddi9

Leave a Reply

Your email address will not be published. Required fields are marked *