ಕೈಕಂಬ:ಕರ್ನಾಟಕ ಭೋವಿ ಕ್ಷೇಮಾಭಿವ್ರದ್ದಿ ಸಂಘ ದ.ಕ ಮತ್ತು ಉಡುಪಿ ಜಿಲ್ಲೆಯ. ಸಂಘದ ಮಹಾಸಭೆಯು ಆ.18 ರವಿವಾರ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಮುಂಭಾಗದ “ಸುಮ ಸದನ” ದಲ್ಲಿ ಜರಗಿತು. ಸಭೆಯಲ್ಲಿ 180 ಜನ ಸದಸ್ಯರು ಹಾಜರಿದ್ದರು.

23vp mahasabeಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷರಾದ ಕೇಶವ ಬಾಲರಾಜ್ ವಹಿಸಿದ್ದರು ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಷಣ್ಮುಗಂ ಮಂಗಳೂರು, ಚಿನ್ನಸ್ವಾಮಿ ಮಿಯಾರ್, ಸಿಲ್ವಕುಮರ್ ಬಲ್ಮಠ, ಸಂಘದ ಗೌರವ ಸಲಹೆಗಾರರಾದ ಜಗದೀಶ್ ಪರ್ಕಳ, ಕರ್ನಾಟಕ ಭೋವಿ ಅಭಿವೃದ್ಧಿ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷರಾದ ದಿಲೀಪ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ವಿನೋದ್ ಕುಮಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಕಲಾ, ಉಪಾಧ್ಯಕ್ಷರಾದ ಚಂದ್ರಕಲಾ ಲಕ್ಕವಳ್ಳಿ, ಹಾಗೂ ಮಹಿಳಾ ಘಟಕದ ರಾಜ್ಯ ಪ್ರಧಾನ ತುಳಸಿ ರಾಮೇಶ್, ಉಪಸ್ತಿತರಿದ್ದರು. ಸಭೆಯಲ್ಲಿ ಜನಾಂಗದ 2018-19ಸಾಲಿನಲ್ಲಿ ಎಸ್. ಎಸ್. ಎಲ್. ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇಖಡ 80/ ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

IMG-20190822-WA0017 ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರದ ತೊಂದರೆ ಹೆಚ್ಚಾಗಿ ನಮ್ಮ ಭೋವಿ ಜನಾಂಗದವರನ್ನು ಕಾಡುತ್ತಿದ್ದು ನೊಂದವರಿಗೆ ಜಾತಿ ಪ್ರಮಾಣ ಪತ್ರ ಕೋಡಿಸುವ ಭರವಸೆ ನೀಡಿದರು. ಷಣ್ಮುಗಂ ಮಂಗಳೂರು ಇವರು ಸ್ವಾಗತಿಸಿದರು, ಜಗದೀಶ್ ಪರ್ಕಳ ಪ್ರಸ್ತಾವನಾ ಮಾತುಗಳನ್ನಾಡಿದರು, ಮಾರಸ್ವಾಮಿಯವರು ಲೆಕ್ಕ ಪತ್ರ ಮಂಡಣೆ ಮಾಡಿದರು, ರಾಜೇಂದ್ರ ಕಿನ್ನಿಕಂಬಳ ಇವರು ಕಾರ್ಯಕ್ರಮ ನಿರೂಪಣೆ ಹಾಗೂ ಧನ್ಯವಾದಗಳನ್ನು ನೀಡಿದರು, ಮುಂದಿನ ಸಾಲಿಗೆ ಸಂಘದ ಅಧ್ಯಕ್ಷರಾಗಿ ಸೆಲ್ವಕುಮರ್ ಬಲ್ಮಠ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾದ ನಿವಾಸ ದೂಪದಕಟ್ಟೆ ಇವರು ಕಿರುಚಿತ್ರ ಆಲ್ಬಾಮ್ ಸಾಂಗ್ ರಚಿಸಿ,ನಟಿಸಿ ನಿರ್ಮಾಪಕತ್ವ ವಹಿಸಿದಕ್ಕೆ ಇವರನ್ನು ಅಭಿನಂದಿಸಲಾಯಿತು.

By Suddi9

Leave a Reply

Your email address will not be published. Required fields are marked *