ಸುದ್ದಿ9 ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ಸೆ. 25 ಬುಧವಾರ ಪಂಡಿತ್ ದೀನದಯಾಳ್ ಜೀ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಪಕ್ಷದ ಕಾರ್ಯಕರ್ತರಿಗೆ ವಿಚಾರ ಸಂಕೀರಣ ಹಾಗೂ ಸಂವಾದ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಮಾಜಿ ವಿಧಾನ ಪರಿಷದತ್ ಸದಸ್ಯ ಬಾಲಕೃಷ್ಣ ಭಟ್ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ ವಹಿಸಿದ್ದರು. ರಾಷ್ಟ್ರ ನಿಷ್ಟ್ರ ಪಕ್ಷನಿಷ್ಠ ಪ್ರಾಮಾನಿಕ ಕರ್ಯಕರ್ತರ ನಿರ್ಮಾನಕ್ಕೆ ದಿನದಯಾಳ್ ಜೀ ಯವರು ತಮ್ಮ ಜೀವನ ಪರ್ಯಂತ ಶ್ರಮಿಸಿದರು.
ಅವರ ಜೀವನ ಗಂದದ ಕೊಂಡಿಯಂತೆ ಇತ್ತು ತನ್ನ ಜೀವನವನ್ನು ಗಂದದ ಕೊಂಡಿನಂತೆ ತೇದು ಈ ರಾಷ್ಟ್ರಕ್ಕೆ ಪಕ್ಷದ ಕಾರ್ಯಕರ್ತರಿಗೆ ಆ ಸುಗಂಧವನ್ನು ನೀಡಿದರು. ದೀನದಯಾಳ್ ಜೀಯವರ ಜೀವನಾಧಾರವನ್ನು ನಮ್ಮ ಬದುಕಿನಲ್ಲಿ ಅನುಸರಿಸಿವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಬಾಲಕೃಷ್ಣ ಭಟ್ ಹೇಲಿದರು.
ಬಿಜೆಪಿ ಕ್ಷೇತ್ರದ ಅಧ್ಯಕ್ಷ ಜಿ ಆನಂದ ಸ್ವಾಗತಿಸಿ ಪ್ರ.ಕಾರ್ಯಧರ್ಶಿ ರಾಮ್ದಾಸ್ ಬಂಟ್ವಾಳ್ ಕರ್ಯಕ್ರಮ ನಿರೂಪಿಸಿದರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ದನ್ಯವಾದವಿತ್ತರು. ಮಾನಿ ಬಿಜೆಪಿ ಸಮಿತಿ ಪ್ರ. ಕಾರ್ಯದರ್ಶಿ ಗಂಗಾಧರ ವಂದೇಮಾತರಂ ಹಾಡಿದರು. ನಂತರ ಕಾರ್ಯಕರ್ತರೊಡನೆ ಸಂವಾದ ಕಾರ್ಯಕ್ರಮ ನಡೆಯಿತು. ಪಕ್ಷದ ಅನೇಕ ಹಿರಿಯ ನಾಯಕರು ಜನಪ್ರತಿನಿಧಿಗಳು ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು. ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.



